ADVERTISEMENT

ಕ್ಯಾನ್ಸರ್‌ಗೆ ಚಿಕಿತ್ಸೆ: ಸರ್ಕಾರಿ ನೌಕರರಿಗೆ ವೆಚ್ಚ ಮರುಪಾವತಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 19:23 IST
Last Updated 21 ಫೆಬ್ರುವರಿ 2019, 19:23 IST

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆ ಒಳಪಟ್ಟ ಸರ್ಕಾರಿ ನೌಕರರು ಹಾಗೂ ಕುಟುಂಬದ ಸದಸ್ಯರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಸಿಬ್ಬಂದಿ ಹಾಗೂ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಸುತ್ತೋಲೆ ಹೊರಡಿಸಿದ್ದಾರೆ. ಕ್ಯಾನ್ಸರ್ ಚಿಕಿತ್ಸೆಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್‌ಎಸ್‌) ನಿಗದಿಪಡಿಸಿದ ಮರುಪಾವತಿ ದರವನ್ನೇ ರಾಜ್ಯದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಸರ್ಕಾರಿ ನೌಕರರು ಹಾಗೂ ಕುಟುಂಬದ ಸದಸ್ಯರು ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚವನ್ನು ಸಿಜಿಎಚ್ಎಸ್ ದರಪಟ್ಟಿಯ ಅನುಸಾರ ಆಯಾ ಇಲಾಖಾ ಹಂತದಲ್ಲಿ ಮರುಪಾವತಿಸಲಾಗುತ್ತದೆ.

ಸರ್ಕಾರದ ಮಾನ್ಯತೆ ಹೊಂದಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಲ್ಲಿ ವೆಚ್ಚದ ಮರುಪಾವತಿ ಮೊತ್ತವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ನಿರ್ಧಾರ ಮಾಡಲಿದ್ದಾರೆ. ಆಸ್ಪತ್ರೆಯಲ್ಲಿ ಒಂದು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದರೂ ವಾರ್ಡ್‌ ಚಾರ್ಜ್‌ ಭರಿಸಲಾಗುತ್ತದೆ. ಸಿಜಿಎಚ್ಎಸ್ ಮಾದರಿಯಲ್ಲೇ ಚಿಕಿತ್ಸಾ ವಿಧಾನಗಳ ಅನುಸಾರ ದರ ನಿಗದಿಪಡಿಸಲಾಗಿದೆ.

ADVERTISEMENT

ಸಿಜಿಎಚ್ಎಸ್ ಮಾದರಿ ದರ ಪಟ್ಟಿ

ಚಿಕಿತ್ಸೆ ದರ (₹ಗಳಲ್ಲಿ)
ಅರಿವಳಿಕೆ:

ಗ್ರೇಡ್ 1– 2,700

ಗ್ರೇಡ್-2 – 5,000

ಗ್ರೇಡ್-3– 8,000

ಗ್ರೇಡ್-4– 10,000

ಗ್ರೇಡ್-5– 14,000

ಗ್ರೇಡ್-6– 18,000

**

ಮೈನರ್ ಒಟಿ ಸೇವಾ ಶುಲ್ಕ– 1,000

ಮೈನರ್ ಒಟಿ-ಡ್ರಗ್ಸ್– 500

ಮೈನರ್ ಒಟಿ-ಡ್ರಗ್ಸ್– (ಜಿಎ) 750

ಮೈನರ್ ಒಟಿ ಸೇವಾ ಶುಲ್ಕ (2ಗಂಟೆಗಿಂತ ಕಡಿಮೆ)– 5,000

ಮೈನರ್ ಒಟಿ ಸೇವಾ ಶುಲ್ಕ (2ರಿಂದ 4ಗಂಟೆ)– 10,000

ಮೈನರ್ ಒಟಿ ಸೇವಾ ಶುಲ್ಕ (4ಗಂಟೆ ಮೇಲ್ಪಟ್ಟು)– 20,000

ಮೈನರ್ ಒಟಿ ಶಸ್ತ್ರಚಿಕಿತ್ಸೆ– 870.

**

ಶಸ್ತ್ರಚಿಕಿತ್ಸೆ

ಗ್ರೇಡ್ 1– 5,000

ಗ್ರೇಡ್ 2– 12,500

ಗ್ರೇಡ್ 3– 20,000

ಗ್ರೇಡ್ 4– 25,000

ಗ್ರೇಡ್ 5– 35,000

ಗ್ರೇಡ್ 6– 45,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.