ADVERTISEMENT

ವಿಜಯನಗರ: ಏ.4ರಿಂದ ಎರಡು ಡೆಮು ರೈಲು ಸಂಚಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 13:01 IST
Last Updated 22 ಮಾರ್ಚ್ 2022, 13:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಹೊಸಪೇಟೆ (ವಿಜಯನಗರ): ನೈರುತ್ಯ ರೈಲ್ವೆ ವಲಯವು ಏ. 4ರಿಂದ ಎರಡು ಡೆಮು ರೈಲುಗಳ ಸಂಚಾರ ಆರಂಭಿಸಲು ನಿರ್ಧರಿಸಿದೆ.

ಹೊಸಪೇಟೆ-ದಾವಣಗೆರೆ-ಹರಿಹರ (ಗಾಡಿ ಸಂಖ್ಯೆ: 07395) ಪ್ರತಿದಿನ ಬೆಳಿಗ್ಗೆ 9.40ಕ್ಕೆ ಹೊಸಪೇಟೆಯಿಂದ ನಿರ್ಗಮಿಸಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ಮಾರ್ಗವಾಗಿ ಮಧ್ಯಾಹ್ನ 1.30ಕ್ಕೆ ದಾವಣಗೆರೆ ತಲುಪಲಿದೆ. ಅಲ್ಲಿಂದ ಹರಿಹರಕ್ಕೆ ತೆರಳಿ ಮಧ್ಯಾಹ್ನ 3ಕ್ಕೆ ಗಾಡಿ ಸಂಖ್ಯೆ 07396 ಅದೇ ಮಾರ್ಗವಾಗಿ ರಾತ್ರಿ 8ಕ್ಕೆ ಹೊಸಪೇಟೆ ಬಂದು ಸೇರಲಿದೆ.

ಹೊಸಪೇಟೆ-ಬಳ್ಳಾರಿ (ಗಾಡಿ ಸಂಖ್ಯೆ: 07397) ಪ್ರತಿದಿನ ಬೆಳಿಗ್ಗೆ 6ಕ್ಕೆ ಹೊಸಪೇಟೆಯಿಂದ ನಿರ್ಮಿಸಿ 7.40ಕ್ಕೆ ಬಳ್ಳಾರಿ ತಲುಪಲಿದೆ. ಬಳ್ಳಾರಿಯಿಂದ (ಗಾಡಿ ಸಂಖ್ಯೆ: 07398) 7.50ಕ್ಕೆ ಬಿಟ್ಟು 9.30ಕ್ಕೆ ಹೊಸಪೇಟೆ ಸೇರಲಿದೆ. ಎರಡು ರೈಲುಗಳಿಗೆ ಸಾಮಾನ್ಯ ದರ್ಜೆ ಟಿಕೆಟ್‌ ದರ ನಿಗದಿಪಡಿಸಲಾಗಿದೆ.

ADVERTISEMENT

ಸಂತಸ:ನೈರುತ್ಯ ರೈಲ್ವೆ ವಲಯದ ನಿರ್ಧಾರವನ್ನು ಸ್ವಾಗತಿಸಿರುವ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ವೈ.ಯಮುನೇಶ್‌, ಕಾರ್ಯದರ್ಶಿ ಮಹೇಶ್‌ ಕುಡುತಿನಿ, ಬಹುದಿನಗಳ ಬೇಡಿಕೆಯನ್ನು ರೈಲ್ವೆ ಇಲಾಖೆಗೆ ಈಡೇರಿಸಿರುವುದು ಖುಷಿ ತಂದಿದೆ. ಬರುವ ದಿನಗಳಲ್ಲಿ ರೈಲಿನ ಸಮಯ ಪರಿಷ್ಕರಣೆಗೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.