ADVERTISEMENT

ಇಸ್ಪೀಟ್ ಜೂಜಾಟ: ಇಬ್ಬರು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 10:45 IST
Last Updated 19 ಫೆಬ್ರುವರಿ 2026, 10:45 IST
<div class="paragraphs"><p>ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್</p></div>

ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್

   

ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಿಗ್ಗಾಂವ್ ಗ್ರಾಮದಿಂದ ಬೆನಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುವ‌ ವೇಳೆ ಸಿಕ್ಕಿಬಿದ್ದಿದ್ದ ಇಬ್ಬರು ಪೊಲೀಸರನ್ನು ಕಲಬುರಗಿ ಪೊಲೀಸ್‌ ಕಮಿಷನರ್ ಶರಣಪ್ಪ ಎಸ್.ಡಿ. ಇಲಾಖಾ ವಿಚಾರಣೆ ಬಾಕಿ ಇರಿಸಿ ಗುರುವಾರ ಅಮಾನತುಗೊಳಿಸಿದ್ದಾರೆ.

ಕಲಬುರಗಿ ನಗರದ ಎಂ.ಬಿ ನಗರ ಪೊಲೀಸ್ ಠಾಣೆ ಸಿವಿಲ್‌ ಪೊಲೀಸ್ ಕಾನ್‌ಸ್ಟೆಬಲ್ ಗುರುನಾಥ ಹಾಗೂ ನಗರದ‌ ಸಶಸ್ತ್ರ ಮೀಸಲು ಘಟಕದ ಕಾನ್‌ಸ್ಟೆಬಲ್ ಮಡಿವಾಳಪ್ಪ ಅಮಾನತುಗೊಂಡವರು.

ADVERTISEMENT

ಇವರು ಫೆಬ್ರುವರಿ 17ರಂದು‌ ಇಸ್ಪೀಟ್ ಜೂಜಾಟದ ವೇಳೆಗೆ ಚಿತ್ತಾಪುರ‌ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಅವರ ವರದಿಯ ಪೊಲೀಸ್ ಕಮಿಷನರ್ ಈ‌ ಕ್ರಮ ಜರುಗಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.