ADVERTISEMENT

ಆಪರೇಷನ್‌ ಕಮಲಕ್ಕೆ ಮೋದಿ, ಶಾ ಪಿತಾಮಹರಿದ್ದಂತೆ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 18:16 IST
Last Updated 13 ಜುಲೈ 2019, 18:16 IST
ವಿ.ಎಸ್‌.ಉಗ್ರಪ್ಪ
ವಿ.ಎಸ್‌.ಉಗ್ರಪ್ಪ   

ಬಳ್ಳಾರಿ: ‘ಮೈತ್ರಿ ಸರ್ಕಾರವನ್ನು ಪತನ ಮಾಡುವ ದುರುದ್ದೇಶದಿಂದ ನಡೆಯುತ್ತಿರುವ ಆಪರೇಷನ್‌ ಕಮಲಕ್ಕೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಿತಾಮಹರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌.ಉಗ್ರಪ್ಪ ಆರೋಪಿಸಿದರು.

ನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, ‘ರಾತ್ರೋ ರಾತ್ರಿ ಗೋವಾದ ಹತ್ತು ಶಾಸಕರು, ಆಂಧ್ರ, ತೆಲಂಗಾಣದ ರಾಜ್ಯಸಭಾ ಸದಸ್ಯರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ರಾಜ್ಯದಲ್ಲಿ ಶಾಸಕರಿಗೆ ₹30–40 ಕೋಟಿ ಆಮಿಷ ಒಡ್ಡಿ ಸುಮಾರು ₹1 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಆದರೆ ಆ ಬಗ್ಗೆ ಕೇಂದ್ರದ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಯಾಕೆ ಮೌನವಾಗಿದೆ’ ಎಂದರು.

‘ಸರ್ಕಾರದ ಪತನಕ್ಕೆ ಬಿಜೆಪಿ ಸತತ ಐದು ಬಾರಿ ಪ್ರಯತ್ನಿಸಿದೆ. ಅಧಿಕಾರವಿಲ್ಲದ ಬಿಜೆಪಿ ನೀರಿನಿಂದ ಹೊರ ಬಂದ ಮೀನಿನಂತ್ತಾಡುತ್ತಿದೆ.ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಎರಡು ದಿನ ಎರಡು ಬಗೆ ತೀರ್ಪನ್ನು ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ’ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.