ADVERTISEMENT

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲ್ಲ’: ಪಕ್ಷದ ಅಭ್ಯರ್ಥಿಯಿಂದಲೇ ಮುಜುಗರದ ಹೇಳಿಕೆ

ಕಲಬುರ್ಗಿ ಲೋಕಸಭಾ ನಿಯೋಜಿತ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 8:24 IST
Last Updated 23 ಮಾರ್ಚ್ 2019, 8:24 IST
 ಉಮೇಶ ಜಾಧವ್‌
 ಉಮೇಶ ಜಾಧವ್‌   

ಯಾದಗಿರಿ: ‘ಇನ್ನು ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲ್ಲ..’ ಎಂದು ಹೇಳುವ ಮೂಲಕ ಕಲಬುರ್ಗಿ ಲೋಕಸಭಾ ನಿಯೋಜಿತ ಅಭ್ಯರ್ಥಿ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಜಿಲ್ಲೆಯ ಗುರುಮಠಕಲ್‌ನ ಖಾಸಾಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಉಮೇಶ ಜಾಧವ್‌, ‘ಬದಲಾಗುತ್ತಿರುವ ರಾಜಕೀಯ ಸ್ಥಿತಿಗತಿ ಪೂರಕ ವಾತಾವರಣ ನಿರ್ಮಿಸುತ್ತಿರುವ ಬಗ್ಗೆ ವಿವರಣೆ ನೀಡುತ್ತಿದ್ದ ಅವರು ಕೊನೆಗೆ ಇನ್ನು ಮುಂದೆ ಬಿಜೆಪಿ ಸರ್ಕಾರ ಇರಲ್ಲ’ ಎಂದು ಹೇಳಿದರು.

‘ಬಾಯಿತಪ್ಪಿ ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರಕ್ಕೆ ಉಳಿಗಾಲ ಇಲ್ಲ’ ಎಂದು ಪುನರುಚ್ಚರಿಸಿದರು.

ADVERTISEMENT

ಖರ್ಗೆ ಅವರಿಂದ ಹೈದರಾಬಾದ್ ಕರ್ನಾಟಕದ ಕಾಂಗ್ರೆಸ್ ನಾಯಕರು ಅನ್ಯಾಯಕ್ಕೊಳಗಾಗಿದ್ದಾರೆ. ಅವರೊಂದಿಗೆ ಯಾವ ನಾಯಕರು ಉಳಿದಿಲ್ಲ. ನಾಯಕರುಗಳ ಬೆಂಬಲದಿಂದಲೇ ಸುದೀರ್ಘ ರಾಜಕೀಯ ಜೀವನ ಪಡೆದಿರುವುದನ್ನು ಅವರು ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

‘ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರ ಆಗುವ ಬಗ್ಗೆ ನಂಬಿಕೆ ಇದೆ. ಅಂಗೀಕಾರ ಆಗದೇ ಇದ್ದರೂ ಕಾನೂನಾತ್ಮಕ ತೊಡಕು ಬರದು. ಹಾಗಾಗಿಯೇ ಬಿಜೆಪಿ ಸೇರಿದ್ದೇನೆ. ಬಿಜೆಪಿ ಟಿಕೆಟ್ ಘೋಷಿಸಿದೆ. ಜನಬೆಂಬಲದಿಂದ ಗೆದ್ದು ಬರುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.