ರಾಯಿಟರ್ಸ್ ಚಿತ್ರ
ಮಧ್ಯಮ ವರ್ಗಕ್ಕೆ ಅಚ್ಚರಿಯ ಕೊಡುಗೆ; ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಅಚ್ಚರಿಯ ಕೊಡುಗೆ ನೀಡಿದ್ದು, ಉಳಿತಾಯ ಹೆಚ್ಚಲಿದೆ. ಇದು ದೂರದೃಷ್ಟಿಯ ‘ವಿಕಸಿತ ಭಾರತ 2047’ ರ ಕಡೆಗೆ ಮುನ್ನಡೆಸುವ ಅಭಿವೃದ್ಧಿಗೆ ಪೂರಕವಾದ ಬಜೆಟ್. ದುಡಿಯುವ ಕೈಗಳಿಗೆ ವಿಪುಲವಾದ ಅವಕಾಶ ಕಲ್ಪಿಸಲಾಗಿದೆ.ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ
ಶಾಲಾ ಶಿಕ್ಷಣಕ್ಕೆ ಉತ್ತೇಜನ: ಬಜೆಟ್‌ನಲ್ಲಿ ಶಾಲಾ ಶಿಕ್ಷಣಕ್ಕೆ ಉತ್ತೇಜನ ನೀಡಿರುವುದು ಸಂತೋಷಕರ. ಈ ಹಿಂದೆ ಶಿಕ್ಷಣ ಸುಧಾರಣೆಗಳ ಸಲಹೆಗಾರನಾಗಿದ್ದಾಗ ಇದಕ್ಕೆ ರಾಜ್ಯದಲ್ಲಿ ಒತ್ತು ನೀಡಲಾಗಿತ್ತು. ಸರ್ಕಾರಿ ಶಾಲೆಗಳಲ್ಲಿ 50 ಸಾವಿರ ‘ಅಟಲ್ ಟಿಂಕರಿಂಗ್ ಲ್ಯಾಬ್’ಗಳ ಸ್ಥಾಪನೆ ಉತ್ತಮ ಕೊಡುಗೆ. ಇದು ಕಲಿಕೆಯ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಅನ್ವೇಷಿಸಲು ಸಹಾಯ ಮಾಡುತ್ತದೆ.ಪ್ರೊ.ಎಂ.ಆರ್. ದೊರೆಸ್ವಾಮಿ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ
ಕ್ಯಾನ್ಸರ್ ಪೀಡಿತರಿಗೆ ನೆರವು: ಇದು ಮಧ್ಯಮ ವರ್ಗ ಸ್ನೇಹಿ ಬಜೆಟ್. ಆರೋಗ್ಯ ಕ್ಷೇತ್ರಕ್ಕೂ ಹಲವು ಕೊಡುಗೆ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಡೇ–ಕೇರ್ ಕೇಂದ್ರಗಳ ನಿರ್ಮಾಣದಿಂದ ಕ್ಯಾನ್ಸರ್ ರೋಗಿಗಳ ಹೊರೆ ಕಡಿಮೆಯಾಗಲಿದೆ. 36 ಔಷಧಗಳ ಆಮದು ಸುಂಕಕ್ಕೆ ವಿನಾಯಿತಿ ನೀಡಿರುವುದು ರೋಗಿಗಳಿಗೆ ಸಹಕಾರಿ. ಇದರಿಂದಾಗಿ ಔಷಧಗಳು ಕಡಿಮೆ ಬೆಲೆಗೆ ದೊರೆಯಲಿವೆ.ಡಾ.ಎಚ್.ಸುದರ್ಶನ್ ಬಲ್ಲಾಳ್, ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.