ADVERTISEMENT

ಬಳ್ಳಾರಿ–ಹೊಸಪೇಟೆ ರೈಲ್ವೆ ಮಾರ್ಗಕ್ಕೆ ₹2,372 ಕೋಟಿ: ಕೇಂದ್ರ ಸಂಪುಟ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 13:39 IST
Last Updated 14 ಫೆಬ್ರುವರಿ 2026, 13:39 IST
<div class="paragraphs"><p>   ರೈಲ್ವೆ&nbsp;ಮಾರ್ಗ</p></div>

ರೈಲ್ವೆ ಮಾರ್ಗ

   

ಬೆಂಗಳೂರು: ಬಳ್ಳಾರಿ ಮತ್ತು ಹೊಸಪೇಟೆ ನಡುವೆ ಮೂರನೇ ಹಾಗೂ ನಾಲ್ಕನೇ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮಾರ್ಗಗಳ ನಿರ್ಮಾಣಕ್ಕೆ ₹2,372 ಕೋಟಿ ವೆಚ್ಚವಾಗಲಿದೆ. 

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ₹18,509 ಕೋಟಿ ವೆಚ್ಚದಲ್ಲಿ ಮೂರು ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು. ಬಳ್ಳಾರಿ–ಹೊಸಪೇಟೆ ನಡುವೆ ಈಗಾಗಲೇ ಜೋಡಿ ಹಳಿ ಮಾರ್ಗ ಇದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.