ADVERTISEMENT

ಅಫ್ಗಾನಿಸ್ತಾನ: ಭಾರತದ ನಿಲುವು ಸ್ಪಷ್ಟಪಡಿಸಿ– ಖಾದರ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:18 IST
Last Updated 20 ಆಗಸ್ಟ್ 2021, 20:18 IST
ಯು.ಟಿ. ಖಾದರ್‌
ಯು.ಟಿ. ಖಾದರ್‌   

ಕಲಬುರ್ಗಿ: ‘ಅಫ್ಗಾನಿಸ್ತಾನದ ಜೊತೆಗೆ ಭಾರತ ಎರಡು ದಶಕಗಳಿಂದ ಸ್ನೇಹ ಸಂಬಂಧ ಹೊಂದಿತ್ತು. ಆದರೆ, ಈಗ ಆ ದೇಶ ನಮ್ಮ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಾ ಜೊತೆಗೆ ಬೆಸೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆ ದೇಶದ ಕುರಿತು ಭಾರತದ ನಿಲುವನ್ನು ಪ್ರಧಾನಿ ಸ್ಪಷ್ಟಪಡಿಸಬೇಕು’ ಎಂದು ಶಾಸಕ ಯು.ಟಿ. ಖಾದರ್‌ ಆಗ್ರಹಿಸಿದರು.

‘ಭಾರತವೂ ಅಲ್ಲಿ ಸಾಕಷ್ಟು ಹೂಡಿಕೆ ಮಾಡಿದೆ. ಬದಲಾದ ವ್ಯವಸ್ಥೆಯಲ್ಲಿ ಕೇಂದ್ರದ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಕೂಲಂಕಶವಾಗಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕು’‌ ಎಂದೂ ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕುಟುಂಬವು ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದಾಗ ಎಷ್ಟೋ ತಾಯಂದಿರು ತಮ್ಮ ತಾಳಿ ಮಾರಿ ಜೀವನ ನಡೆಸಿದ ಸ್ಥಿತಿಯನ್ನು ನಾವು ನೋಡಿದ್ದೇವೆ. ಈಗ ಭಾರತವೂ ಇಂಥದ್ದೇ ಪರಿಸ್ಥಿತಿ ಅನುಭವಿಸುತ್ತಿದೆ. ಸ್ಪಷ್ಟವಾದ ಆರ್ಥಿಕ ನೀತಿ ಇಲ್ಲದ ಕಾರಣ ಸಣ್ಣಸಣ್ಣ ರಾಷ್ಟ್ರಗಳ ಮುಂದೆಯೂ ನಾವು ಕೈಚಾಚುವಂತಾಗಿದೆ’ ಎಂದೂ ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.