ವಾಲ್ಮೀಕಿ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: 2025ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ರಾಜ್ಯದ ಐದು ಮಂದಿಯನ್ನು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಆಯ್ಕೆ ಮಾಡಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಬೆಂಗಳೂರು ಕೇಂದ್ರ ವಿಭಾಗದಿಂದ ನಾಗರಾಜು ಗಾಣದ ಹುಣಸೆ (ಮಾಧ್ಯಮ ಕ್ಷೇತ್ರ) ಹಾಗೂ ಪಿ. ತಿಪ್ಪೇಸ್ವಾಮಿ (ರಂಗಭೂಮಿ ಕ್ಷೇತ್ರ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೈಸೂರು ವಿಭಾಗದಿಂದ ಜೆ.ಕೆ ಮುತ್ತಮ್ಮ (ಸಂಘಟನೆ ಕ್ಷೇತ್ರ), ಬೆಳಗಾವಿ ವಿಭಾಗದಲ್ಲಿ ಮಳಸಿದ್ದ ಲಕ್ಷ್ಮಣ ನಾಯಕೋಡಿ (ಸಮಾಜ ಸೇವೆ ಕ್ಷೇತ್ರ) ಮತ್ತು ಕಲಬುರಗಿ ವಿಭಾಗದಲ್ಲಿ ಕೆ. ಉಚ್ಚಂಗಪ್ಪ (ಸಾಮಾಜಿಕ ಕ್ಷೇತ್ರ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.