
ಪ್ರಜಾವಾಣಿ ವಾರ್ತೆ
ಸಿಂದಗಿಯಲ್ಲಿ ತಲೆಕೆಳಗಾಗಿ ಹಾರಿದ ರಾಷ್ಟ್ರಧ್ವಜ
ಸಿಂದಗಿ (ವಿಜಯಪುರ ಜಿಲ್ಲೆ): ಪಟ್ಟಣದ ತಾಲ್ಲೂಕು ಪ್ರಜಾಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಲಾಯಿತು. ಶಾಸಕ ಅಶೋಕ ಮನಗೂಳಿ ಸಮ್ಮುಖದಲ್ಲಿ ತಹಶೀಲ್ದಾರ್ ಕರೆಪ್ಪ ಧ್ವಜಾರೋಹಣ ನೆರವೇರಿಸಿ ದ್ದರು. ರಾಷ್ಟ್ರಧ್ವಜ ತಲೆಕೆಳಗಾಗಿತ್ತು. ರಾಷ್ಟ್ರಗೀತೆ ಬಳಿಕ, ಧ್ವಜವನ್ನು ಕೆಳಗಿಳಿಸಿ ಪುನಃ ಆರೋಹಣ ಮಾಡಲಾಯಿತು.