ADVERTISEMENT

ವಿನಯ ಕುಲಕರ್ಣಿ ತೀವ್ರ ವಿಚಾರಣೆ

ಹುಟ್ಟುಹಬ್ಬ: ಕುಟುಂಬದ ಸದಸ್ಯರಿಗೆ ಭೇಟಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 17:18 IST
Last Updated 7 ನವೆಂಬರ್ 2020, 17:18 IST
ಬೆಳಗಾವಿಯ ಹಿಂಡಲಗಾ ಕಾರಾಗೃಹಲ್ಲಿಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಶನಿವಾರ ತಮ್ಮ ವಶಕ್ಕೆ ಪಡೆದು ಕರೆದೊಯ್ದರು
ಬೆಳಗಾವಿಯ ಹಿಂಡಲಗಾ ಕಾರಾಗೃಹಲ್ಲಿಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಬಿಐ ಅಧಿಕಾರಿಗಳು ಶನಿವಾರ ತಮ್ಮ ವಶಕ್ಕೆ ಪಡೆದು ಕರೆದೊಯ್ದರು   

ಹುಬ್ಬಳ್ಳಿ/ ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಮೂರು ದಿನ ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು, ಮೊದಲ ದಿನವಾದ ಶನಿವಾರ ನಗರದ ಗೋಕುಲ ರಸ್ತೆಯ ಸಿಎಆರ್‌ ಮೈದಾನದ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಿದರು.

ವಿನಯ ಅವರನ್ನು ಬೆಳಗಾವಿಯ ಹಿಂಡಲಗಾ ಕಾರಾಗೃಹದಿಂದ ಬೆಳಿಗ್ಗೆ ಹುಬ್ಬಳ್ಳಿಗೆ ಕರೆತಂದ ಸಿಬಿಐ ತಂಡ ದಿನವಿಡೀ ವಿಚಾರಣೆ ನಡೆಸಿತು. ವಿನಯ ಅವರ ಆಪ್ತ ಕಾರ್ಯದರ್ಶಿ ಸೋಮಶೇಖರ ನ್ಯಾಮಗೌಡ ಅವರನ್ನು ಧಾರವಾಡದ ಉಪನಗರ ಪೊಲೀಸ್‌ ಠಾಣೆಯಿಂದ ವಿಚಾರಣಾ ಸ್ಥಳಕ್ಕೆ ಕರೆತಂದು ಮಾಹಿತಿ ಕಲೆಹಾಕಿದ್ದಾರೆ.

ಶನಿವಾರ ವಿನಯ ಅವರ ಜನ್ಮದಿನವಾಗಿದ್ದರಿಂದ ವಿಚಾರಣಾ ಸ್ಥಳಕ್ಕೆ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬರಬಹುದೆಂದು ಮೈದಾನದ ಹೊರಗೆ ಬ್ಯಾರಿಕೇಡ್‌ ಹಾಕಿ ಪ್ರವೇಶ ನಿಷೇಧಿಸಲಾಗಿತ್ತು. ಕೆಲವರು ಮೈದಾನದ ಹೊರಗೆ ಕೇಕ್‌ ಕತ್ತರಿಸಿ ಶುಭಾಶಯ ಕೋರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.