ADVERTISEMENT

ವಿಷ್ಣು ಸ್ಮಾರಕಕ್ಕೆ10 ಗುಂಟೆ ಜಮೀನು ಮೀಸಲಿಡಲು ಸಿಎಂಗೆ ಭಾರತಿ, ಅನಿರುದ್ಧ ಮನವಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 14:07 IST
Last Updated 3 ಸೆಪ್ಟೆಂಬರ್ 2025, 14:07 IST
<div class="paragraphs"><p>ಭೇಟಿಯ ವೇಳೆ ಭಾರತಿ ವಿಷ್ಣುವರ್ಧನ್‌ ಮತ್ತು ಸಿದ್ದರಾಮಯ್ಯ ಚರ್ಚಿಸಿದರು. ಅನಿರುದ್ಧ ಉಪಸ್ಥಿತರಿದ್ದರು</p></div>

ಭೇಟಿಯ ವೇಳೆ ಭಾರತಿ ವಿಷ್ಣುವರ್ಧನ್‌ ಮತ್ತು ಸಿದ್ದರಾಮಯ್ಯ ಚರ್ಚಿಸಿದರು. ಅನಿರುದ್ಧ ಉಪಸ್ಥಿತರಿದ್ದರು

   

ಬೆಂಗಳೂರು: ನಟ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಾಗ ಮೀಸಲಿಡಬೇಕು ಎಂದು ನಟಿ ಭಾರತಿ ವಿಷ್ಣುವರ್ಧನ್‌ ಮತ್ತು ಅನಿರುದ್ಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

ಭಾರತಿ ಮತ್ತು ಅನಿರುದ್ಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದು, ಅಭಿಮಾನ್ ಸ್ಟುಡಿಯೋ ಈಗ ಸರಕಾರದ ವಶಕ್ಕೆ ಬಂದಿದ್ದು. ವಿಷ್ಣುವರ್ಧನ್ ಅಂತ್ಯಕ್ರಿಯೆ ನಡೆದ ಸ್ಥಳ ಸೇರಿದಂತೆ 10ಗುಂಟೆ ಜಾಗ ಸ್ಮಾರಕಕ್ಕೆ ಬಿಟ್ಟು ಕೊಡಿ. ವಿಷ್ಣುವರ್ಧನ್‌ ಅವರ ಜನ್ಮದಿನದ ಒಳಗೆ ಸರ್ಕಾರವು ಭೂಮಿ ನೀಡಲು ಒಪ್ಪಿಗೆ ಸೂಚಿಸಬೇಕು. ಜತೆಗೆ ವಿಷ್ಣುವರ್ಧನ್‌ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಕೋರಿದರು.

ADVERTISEMENT

ನಂತರ ಸುದ್ದಿಗಾರರ ಜತೆ ಮಾತನಾಡಿದ ಅನಿರುದ್ಧ, ‘ನಮ್ಮ ಬೇಡಿಕೆಯನ್ನು ಪರಿಶೀಲಿಸಿ, ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಸರ್ಕಾರವು ಶೀಘ್ರವೇ ಜಮೀನು ಒದಗಿಸುವ ನಿರೀಕ್ಷೆ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.