ಬೆಂಗಳೂರು: ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯಡಿ (ಮುಜರಾಯಿ) ಇರುವ ‘ಸಿ’ ವರ್ಗದ ದೇವಾಲಯಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರವು ‘ವಿಷನ್ ಗ್ರೂಪ್’ ರಚಿಸಿದೆ.
ಕೆ.ಇ. ರಾಧಾಕೃಷ್ಣ, ಕೆ.ಸಿ. ರಾಮಮೂರ್ತಿ, ಶಕುಂತಲಾ ಶೆಟ್ಟಿ, ಮಹಾಂತೇಶ್ ಬಿರಾದಾರ್, ಶ್ರೀಪಾದ ಎಸ್.ಬಿ., ಶ್ರೀನಿವಾಸ ಪಿ.ಸಿ., ಯತಿರಾಜ ಸಂಪತ್ ಕುಮಾರನ್ ಎಸ್.ಎನ್. ಅವರನ್ನು ‘ವಿಶನ್ ಗ್ರೂಪ್’ ಸದಸ್ಯರನ್ನಾಗಿ ಮಾಡಿದೆ.
ರಾಜ್ಯದಲ್ಲಿ 34,563 ಮುಜರಾಯಿ ದೇವಸ್ಥಾನಗಳಿವೆ. ಅದರಲ್ಲಿ 'ಎ’ ವರ್ಗದ 205, ‘ಬಿ’ ವರ್ಗದ 193 ದೇವಸ್ಥಾನಗಳಾಗಿದ್ದು, ಕಡಿಮೆ ಆದಾಯ ಇರುವ 34,165 ಪುರಾತನ ದೇವಸ್ಥಾನಗಳನ್ನು ‘ಸಿ’ ವರ್ಗ ಎಂದು ಗುರುತಿಸಲಾಗಿದೆ. ಇವುಗಳ ಅಭಿವೃದ್ಧಿಗೆ ಅಗತ್ಯ ಸಂದರ್ಭದಲ್ಲಿ ಸರ್ಕಾರದಿಂದ ಹಾಗೂ ಸಾಮಾನ್ಯ ಸಂಗ್ರಹಣಾ ನಿಧಿಯಿಂದ ಅನುದಾನ ನೀಡಲಾಗುತ್ತಿದೆ. ದೇವಾಲಯಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ, ಅವುಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ರಾಜ್ಯ ಧಾರ್ಮಿಕ ಪರಿಷತ್ ನಿರ್ದೇಶನ ನೀಡಿತ್ತು.
ಅದರಂತೆ ‘ವಿಷನ್ ಗ್ರೂಪ್’ ರಚಿಸುವುದಾಗಿ ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.