ADVERTISEMENT

ಎರಡೂ ಕೈಗಳಲ್ಲಿದ ಲಕ್ಷ್ಮೀ ಕಾಲಿನಿಂದಲೇ ಮತ ಚಲಾಯಿಸಿದರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 5:42 IST
Last Updated 23 ಏಪ್ರಿಲ್ 2019, 5:42 IST
   

ಕಾನಹೊಸಹಳ್ಳಿ: ಸಮೀಪದ ಗುಂಡುಮುಣುಗಿನ ಲಕ್ಷ್ಮೀಅವರಿಗೆ ಎರಡೂ ಕೈಗಳಿಲ್ಲದಿರುವುದರಿಂದ ಕಾಲಿನಿಂದ ಮತ ಗಟ್ಟೇ ಸಂಖ್ಯೆ 118 ರಲ್ಲಿ ಮತ ಚಲಾಯಿಸಿ ಉಳಿದವರಿಗೂ ಮಾದರಿಯಾಗಿದ್ದಾರೆ.

ಮತದಾನ ಮಾಡಲು ಬಂದ ಲಕ್ಷ್ಮೀ ಅವರ ಅವರ ಎಡಗಾಲಿಗೆ ಚುನಾವಣಾ ಸಿಬ್ಬಂದಿ ಶಾಹಿ ಹಾಕಿದರು.ಮತದಾನದ ಬಳಿಕ ಮಾತನಾಡಿದ ಅವರು ‘ಒಂದು ಮತವೂಮುಖ್ಯವಾದದ್ದು’ ಎಂದು ತಿಳಿಸಿದರು.

ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ADVERTISEMENT

ಹಸಿಮಣಿ ಏರುವ ಮುನ್ನ ಮಧುಮಗಳಿಂದಮತದಾನ
ಹೊಸಪೇಟೆ:ವಿಜಯನಗರ ವಿಧಾನಸಭೆ ಕ್ಷೇತ್ರದ ಮಲಪನಗುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 219 ರಲ್ಲಿ ನವವಧು ಟಿ. ರಮಾ ಹಸಿಮಣೆ ಏರುವ ಮುನ್ನ ಮತದಾನ ಮಾಡುವ ಮೂಲಕ ವಿಶೇಷ ಗಮನ ಸೆಳೆದರು.

ಬಳ್ಳಾರಿ ಜಿಲ್ಲೆಯ ತಂಬ್ರಹಳ್ಳಿ ಸಮೀಪದ ಅಯ್ಯನಹಳ್ಳಿಯಲ್ಲಿ ಮದುವೆ ನಿಶ್ಚಯವಾಗಿದೆ. ಮದುವೆ ಮಂಟಪಕ್ಕೆ ತೆರಳುವ ಮುನ್ನ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ. ನಂತರ ಮದುವೆ ಮಂಟಪಕ್ಕೆ ಕುಟುಂಬ ಸದಸ್ಯರೊಂದಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.