
ಪ್ರಜಾವಾಣಿ ವಾರ್ತೆಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಘೋಷಿಸಿದ ಎಂಬಿಎ ವಿಭಾಗದ 10 ರ್‍ಯಾಂಕ್‌ಗಳಲ್ಲಿ ಪ್ರಥಮ ರ್‍ಯಾಂಕ್ ಸೇರಿದಂತೆ ಒಟ್ಟು ಆರು ರ್‍ಯಾಂಕ್‌ಗಳು ಆರ್‌ಎನ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳ ಪಾಲಾಗಿವೆ.
ಎಚ್.ಸಿ.ಕಾವ್ಯಾ– ಪ್ರಥಮ ರ‍್ಯಾಂಕ್ (ಚಿನ್ನದ ಪದಕ), ಆರ್.ಪಿ.ಅನನ್ಯಾ (4), ಶಿವಾನಿ ಸೀತಾರಾಮ ನಾಯಕ್ (5), ಬಿ.ಸಿ.ಐಶ್ವರ್ಯಾ (7) ಸ್ಮಿತಾ ಸುಧಾಕರ್ ಹೆಗಡೆ (8), ಸೀಮಾ ಎಚ್. ಜೈನ್ (10) ರ್‍ಯಾಂಕ್ ಪಡೆದಿದ್ದಾರೆ.
2001ರಲ್ಲಿ ಸ್ಥಾಪಿತಗೊಂಡು ಪ್ರಸಕ್ತ ವರ್ಷ ರಜತ ಮಹೋತ್ಸವ ಆಚರಿಸುತ್ತಿರುವ ಆರ್‌ಎನ್‌ಎಸ್‌ಐಟಿ ಶೈಕ್ಷಣಿಕ ಶ್ರೇಷ್ಠತೆ, ಪ್ಲೇಸ್‌ಮೆಂಟ್, ಸಂಶೋಧನೆ, ನಾವೀನ್ಯ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ ಎಂದು ಪ್ರಕಟಣೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.