ADVERTISEMENT

ಬೇಲೂರು: ಹೆಚ್ಚುವರಿ ನೀರು ಜನರಿಗೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 5:31 IST
Last Updated 20 ಮೇ 2019, 5:31 IST
ಕೊಳವೆ ಬಾವಿಯಿಂದ ಉಚಿತವಾಗಿ ನೀರು ಪಡೆಯುತ್ತಿರುವ ಮಹಿಳೆ
ಕೊಳವೆ ಬಾವಿಯಿಂದ ಉಚಿತವಾಗಿ ನೀರು ಪಡೆಯುತ್ತಿರುವ ಮಹಿಳೆ   

ಬೇಲೂರು: ತಾಲ್ಲೂಕಿನ ದೊಡ್ಡಿಹಳ್ಳಿಯ ರೈತ ರಮೇಶ್‌ ಅವರು ಮೂರು ತಿಂಗಳಿನಿಂದ ತಮ್ಮ ಕೊಳವೆಬಾವಿ ನೀರನ್ನು ಜನರಿಗೆ ಉಚಿತವಾಗಿ ನೀಡುತ್ತಿದ್ದಾರೆ.

ಬಿಕ್ಕೋಡು ಹೋಬಳಿ ಮಲೆನಾಡು ಪ್ರದೇಶವಾಗಿದ್ದರೂ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಎಂಟು ಎಕರೆ ಜಮೀನು ಹೊಂದಿರುವ ರಮೇಶ್‌, ಆರು ವರ್ಷಗಳ ಹಿಂದೆ ಕೊರೆಸಿದ ಕೊಳವೆಬಾವಿಯಲ್ಲಿ ನಾಲ್ಕೂವರೆ ಇಂಚು ನೀರು ಬಂದಿತ್ತು. ತಮ್ಮ ಜಮೀನಿಗೆ ಬಳಸಿಕೊಂಡು,ಉಳಿದನೀರನ್ನು ಅಕ್ಕಪಕ್ಕದ ರೈತರು ಹಾಗೂ ದೊಡ್ಡಿಹಳ್ಳಿಯ ಗ್ರಾಮಸ್ಥರಿಗೆ ನೀಡುತ್ತಿದ್ದಾರೆ.

‘ತಂದೆಯ ಕಾಲದಲ್ಲಿ ಕುಡಿಯುವ ನೀರಿಗೆ ಕೆರೆ, ಬಾವಿಗಳೇ ಆಶ್ರಯವಾಗಿದ್ದವು. ದೂರದಿಂದ ನೀರು ಹೊರುವ ಸ್ಥಿತಿ ಇತ್ತು. ಹಲವು ಬಾರಿ ಅಶುದ್ಧ ನೀರನ್ನೇ ಕುಡಿಯಬೇಕಾಗಿತ್ತು. ಈಗ ಕೊಳವೆಬಾವಿ ಕೊರೆಸಿದ್ದು, ನೀರು ಸಾಕಾಗುವಷ್ಟು ಸಿಗುತ್ತಿದೆ. ಉಳಿದ ನೀರನ್ನು ಜನರು ಪಡೆಯಲಿ ಎಂಬ ಉದ್ದೇಶದಿಂದ ಕೊಳವೆಬಾವಿಗೆನಲ್ಲಿ ಅಳವಡಿಸಿದ್ದೇವೆ. ಟ್ಯಾಂಕರ್‌ ಇರುವವರೂ ನೀರನ್ನು ಪಡೆದು ಉಪಯೋಗಿಸಬಹುದು’ ಎಂದು ರಮೇಶ್‌ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.