ADVERTISEMENT

ರೈತ–ಚಿಂತಾಕ್ರಾಂತ | ಕೊಳೆಯುತ್ತಿದೆ ಕಲ್ಲಂಗಡಿ

ವೀರೇಶ.ಎನ್.ಮಠಪತಿ
Published 5 ಮೇ 2020, 19:21 IST
Last Updated 5 ಮೇ 2020, 19:21 IST
   

ಚಿಟಗುಪ್ಪ (ಬೀದರ್‌ ಜಿಲ್ಲೆ):ತಾಲ್ಲೂಕಿನ ನಿರ್ಣಾ ಗ್ರಾಮದ ರೈತ ಯಾಮರೆಡ್ಡಿ ಹಾಸರೆಡ್ಡಿ ಅವರು ಬೆಳೆದಿರುವ ಕಲ್ಲಂಗಡಿ ಬೆಳೆ ಹೊಲದಲ್ಲಿಯೇ ಉಳಿದಿದೆ.

‘₹1.10 ಲಕ್ಷ ಖರ್ಚು ಮಾಡಿ ಎರಡು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದು, ಈಗ ಕಟಾವಿಗೆ ಬಂದಿದೆ. ವ್ಯಾಪಾರಿಗಳು ಖರೀದಿಗೆ ಮುಂದೆ ಬರುತ್ತಿಲ್ಲ.ನಗರಗಳಿಗೆ ಒಯ್ದರೂ ಮಾರಾಟ ಆಗಲಿಲ್ಲ. ವಾಹನ ಬಾಡಿಗೆಯ ಹೊರೆಯೂ ಹೆಚ್ಚಿತು’ ಎಂದು ಯಾಮರೆಡ್ಡಿ ಹೇಳಿದರು.

‘ಸಮಸ್ಯೆಯನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು,ಅವರೂ ಖರೀದಿಗೆ ವ್ಯವಸ್ಥೆ ಮಾಡಿಲ್ಲ. ಹೊಲದಲ್ಲೇ ಕೊಳೆಯಲಾರಂಭಿಸಿವೆ‘ ಎಂದು ಅವರು ದೂರಿದರು.

ADVERTISEMENT

’ಬೇಸಿಗೆಯಲ್ಲಿ ಕಲ್ಲಂಗಡಿಗೆ ಬೇಡಿಕೆ ಇರುತ್ತದೆ. ಉತ್ತಮ ಆದಾಯದ ನಿರೀಕ್ಷೆ ಇತ್ತು. ಈಗ ಲಾಕ್‌ ಡೌನ್‌ ಪರಿಣಾಮ ಮಾರುಕಟ್ಟೆ ಇಲ್ಲದೆ ನನ್ನಂತಹ ರೈತರು ಸಂಕಷ್ಟಕ್ಕೆ ಸಿಲುಕಿದ್ದೇವೆ’ ಅಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.