ADVERTISEMENT

ಕೋವಿಡ್: ಪರಿಸ್ಥಿತಿ ಬಿಗಡಾಯಿಸಿದರೆ ಶಾಲೆ ಸ್ಥಗಿತಕ್ಕೆ ಹಿಂದುಮುಂದೆ ನೋಡಲ್ಲ –ಸಚಿವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 9:38 IST
Last Updated 6 ಡಿಸೆಂಬರ್ 2021, 9:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 'ಕೋವಿಡ್ ಮಕ್ಕಳ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರಲ್ಲ ಎಂದು ವರದಿಗಳು ಬಂದಿವೆ. ಹೀಗಾಗಿ ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅಂಥ ಪರಿಸ್ಥಿತಿ ಬಂದರೆ ತರಗತಿಗಳನ್ನು ಸ್ಥಗಿತಗೊಳಿಸಲು ಹಿಂದುಮುಂದೆ ನೋಡುವುದಿಲ್ಲ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು,'ಮೂರನೇ ಅಲೆ ಫೆಬ್ರವರಿ ಅಂತ್ಯಕ್ಕೆ ಬರಬಹುದು ಎಂದು ತಜ್ಞರು ಹೇಳುತ್ತಾರೆ. ಪರೀಕ್ಷೆ ಸಂದರ್ಭದಲ್ಲಿ ಸೋಂಕು ಹೆಚ್ಚಾದರೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಸೋಂಕು ಹೆಚ್ಚಾದರೆ ಪರೀಕ್ಷೆ ನಿಲ್ಲಿಸುವ ಸಂದರ್ಭ ಬಂದರೆ ನಿಲ್ಲಿಸ್ತೇವೆ'ಎಂದರು.

'ಕೋವಿಡ್ ಹೆಚ್ಚಾದರೆ, ಶಾಲೆ, ಪರೀಕ್ಷೆ ನಿಲ್ಲಿಸುವ ಅಗತ್ಯ ಬಂದರೆ ಅದಕ್ಕೂ ಸರ್ಕಾರ ಸಿದ್ಧವಿದೆ. ಸದ್ಯ ಗಾಬರಿಯಾಗುವ ಸನ್ನಿವೇಶ ಇಲ್ಲ' ಎಂದರು.

ADVERTISEMENT

'ಸೋಂಕು ಹೆಚ್ಚಳ ಆತಂಕ ತಂದಿದೆ.‌ ಸೋಂಕು ಕಂಡುಬಂದಿರುವುದು ವಸತಿ, ನವೋದಯ ಶಾಲೆಗಳಲ್ಲಿ. 1-10 ಸರ್ಕಾರಿ ಶಾಲೆಗಳಲ್ಲಿ ಸೋಂಕು ಕಂಡುಬಂದಿಲ್ಲ. ವಸತಿ, ನವೋದಯ ಶಾಲೆಗಳಲ್ಲಿ ಸೋಂಕು ಹಿನ್ನೆಲೆಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ' ಎಂದರು

'ಯಾವುದೇ ವಿದ್ಯಾರ್ಥಿಗೆ ತೊಂದರೆ ಆಗಿಲ್ಲ, ಚಿಕಿತ್ಸೆ ಕೊಡಲಾಗಿದೆ. ಇಬ್ಬರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ.. ಯಾವುದೇ ಸಮಸ್ಯೆ, ಆತಂಕ ಇಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಕಠಿಣವಾಗಿ ಪಾಲಿಸುತ್ತೇವೆ

'ನಾನು ಮಂಗಳವಾರ ಮತ್ತು ಬುಧವಾರ ಸೋಂಕು ಪತ್ತೆಯಾದ ವಸತಿ, ನವೋದಯ ಶಾಲೆಗಳಿಗೆ ಭೇಟಿ ನೀಡುತ್ತೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.