ADVERTISEMENT

ಮುಖ್ಯಮಂತ್ರಿ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧ: ಸಚಿವ ಅಶ್ವತ್ಥ ನಾರಾಯಣ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 7:00 IST
Last Updated 11 ಜನವರಿ 2021, 7:00 IST
ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ
ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ    

ಬೆಂಗಳೂರು: 'ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಖ್ಯಮಂತ್ರಿ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಬದ್ಧರಾಗಿರುತ್ತೇವೆ' ಎಂದು ಉಪ‌ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಸೋಮವಾರ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ.ಹೈಕಮಾಂಡ್ ಜತೆ ಮುಖ್ಯಮಂತ್ರಿ ಸಂಪರ್ಕದಲ್ಲಿದ್ದಾರೆ. ಎಲ್ಲ ಮಾಹಿತಿಯನ್ನು ಮುಖ್ಯಮಂತ್ರಿಯವರೇ ತಿಳಿಸುತ್ತಾರೆ' ಎಂದರು.

ಆಫ್ ಲೈನ್ ತರಗತಿ: 'ಪದವಿ ಸ್ನಾತಕೋತ್ತರ‌ ಕೋರ್ಸ್ ಗಳಿಗೆ‌ ಆಫ್ ಲೈನ್ ತರಗತಿ ಜ. 15ರಿಂದ ಆರಂಭವಾಗಲಿದೆ. ಮೊದಲ ಮತ್ತು ಎರಡನೇ ವರ್ಷದ ತರಗತಿಗಳು ಆರಂಭವಾಗಲಿದೆ' ಎಂದರು.

ADVERTISEMENT

'ಎಂಜಿನಿಯರಿಂಗ್ ಮೂರನೇ ವರ್ಷದ ಆಫ್ ಲೈನ್ ತರಗತಿಯೂ ಜನವರಿ 15 ರಿಂದ ಆರಂಭವಾಗಲಿದೆ. ಜೊತೆಗೆ ಡಿಪ್ಲೊಮಾ ತರಗತಿಯೂ ಆರಂಭವಾಗಲಿದೆ' ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.