ADVERTISEMENT

ಗ್ರಾಮದ ಜನರನ್ನು ಅಟ್ಟಾಡಿಸಿ ಕಚ್ಚಿದ ತೋಳ: 10 ಜನರಿಗೆ ಗಾಯ

ರಾಯಚೂರು ಮಸ್ಕಿ ತಾಲೂಕು ಚಿಲ್ಕರಾಗಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಘಟನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2020, 8:39 IST
Last Updated 9 ಫೆಬ್ರುವರಿ 2020, 8:39 IST
ತೋಳ ದಾಳಿ ನಡೆಸಿದ್ದರಿಂದ ಗಾಯಗೊಂಡಿರುವ ವ್ಯಕ್ತಿ
ತೋಳ ದಾಳಿ ನಡೆಸಿದ್ದರಿಂದ ಗಾಯಗೊಂಡಿರುವ ವ್ಯಕ್ತಿ   
""
""

ರಾಯಚೂರು: ಜಿಲ್ಲೆಯ ಮಸ್ಕಿ ತಾಲ್ಲೂಕಿನ ಚಿಲ್ಕರಾಗಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ತೊಳವೊಂದು ದಾಳಿ ಮಾಡಿದ್ದು, 10 ಜನರು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಮುಖದ ಭಾಗದಲ್ಲಿ ಉಗುರುಗಳಿಂದ ಪರಿಚಿದ್ದು, ಚರ್ಮ ಕಿತ್ತುಬಂದಿದೆ. ತೀವ್ರ ರಕ್ತಸ್ರಾವದಿಂದಾಗಿಜನರು ಗೋಳಾಡುವುದು ಸಾಮಾನ್ಯವಾಗಿತ್ತು. ಗಾಯಗೊಂಡವರನ್ನುಚಿಕಿತ್ಸೆಗಾಗಿ ಲಿಂಗಸುಗೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಾಳಿ ಮಾಡಿದ ತೋಳವನ್ನು ಹೊಡೆದು ಸಾಯಿಸಿರುವ ಗ್ರಾಮಸ್ಥರು

ಅಮರಪ್ಪ ಕುಂಬಾರ, ಅಮರಮ್ಮ ಚಿಲ್ಕರಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮಕ್ಕೆ ನುಗ್ಗಿದ್ದ ತೋಳವನ್ನು ಜನರು ಹೊಡೆದು ಸಾಯಿಸಿದ್ದಾರೆ. ಗಾಯಗೊಂಡವರ ಸಂಖ್ಯೆ ಇನ್ನು ಹೆಚ್ಚಾಗಿದ್ದು, ವಿವಿಧೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ತೆರಳಿದ್ದಾರೆ.

ADVERTISEMENT
ತೋಳ ದಾಳಿ ಮಾಡಿದ ಪರಿಣಾಮ ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.