ADVERTISEMENT

ರಾಜ್ಯದ ಹಣಕಾಸು ಸ್ಥಿತಿ ಚಿಂತಾಜನಕ: ವೈ.ಎಸ್‌.ವಿ ದತ್ತಾ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 12:38 IST
Last Updated 6 ಮಾರ್ಚ್ 2020, 12:38 IST
ವೈಎಸ್‌ವಿ ದತ್ತ
ವೈಎಸ್‌ವಿ ದತ್ತ   

ಹುಬ್ಬಳ್ಳಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಪ್ರಾದೇಶಿಕ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಜೆಡಿಎಸ್ ಮುಖಂಡ ವೈ.ಎಸ್.ವಿ. ದತ್ತ ಆರೋಪಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ ಸದ್ಯಕ್ಕೆ ಮಂಕಾಗಿದೆ‌. ಒಂದಿಲ್ಲಾ ಒಂದು ರೀತಿಯಲ್ಲಿ ನಮ್ಮ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಮುಂಬೈ ಕರ್ನಾಟಕದ ಎಂಟು ಘಟಕಗಳ ಕಾರ್ಯಾಗಾರ ಸಭೆಯನ್ನು ಶನಿವಾರ ಕರೆಯಲಾಗಿದೆ. ಜನತಾ ಪರಿವಾರದ ಹುಟ್ಟು ಮತ್ತು ಜನಾಂದೋಲನ ಬಗ್ಗೆ ಚರ್ಚೆ, ಜನತಾ ಪರಿವಾರ ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚರ್ಚೆ. ಸಾಮಾಜಿಕ ಜಾಲತಾಣದಲ್ಲಿ ನಮ್ಮ‌ ಪಕ್ಷದ ಪ್ರಚಾರವನ್ನು ಹೇಗೆ ಮಾಡಬೇಕೆಂಬುದನ್ನು ಚರ್ಚಿಸಲಾಗುವುದು ಎಂದು ತಿಳಿಸಿದರು.

* ನಾಡಿದ್ದು ಪಕ್ಷದ ಕಾರ್ಯಕರ್ತರ ಜೊತೆಗೆ ಪರಸ್ಪರ ವಿಚಾರ ವಿನಿಮಯಗಳು ನಡೆಯುತ್ತವೆ.

ADVERTISEMENT

* ಉದ್ಘಾಟನೆ ಕಾರ್ಯಕ್ರಮದಲ್ಲಿಸಮಕಾಲೀನ ರಾಜಕಾರಣದ ಬಗ್ಗೆ ದೇವನೂರು ಮಹಾದೇವ ಬರೆದ "ಇಂದು ಭಾರತ ಮಾತನಾಡುತ್ತಿದೆ" ಪುಸ್ತಕ ಬಿಡುಗಡೆಯಾಗಲಿದೆ.

* ಎಚ್.ಡಿ. ದೇವೇಗೌಡರು ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಇನ್ನೊಂದು ಪುಸ್ತಕ ಬಿಡುಗಡೆಯಾಗಲಿದೆ.

ಪ್ರಾದೇಶಿಕ ಪಕ್ಷಗಳು ಅನಿವಾರ್ಯ

ನಾವು ತಪ್ಪು ಮಾಡಿದ್ದೇವೆ, ನಮಗೆ ತಪ್ಪಿನ ಅರಿವಾಗಿದೆ, ಮತ್ತೆ ತಪ್ಪು ಮರುಕಳಿಸಿದಂತೆ ನೋಡಿಕೊಳ್ಳುತ್ತೆವೆ. ನಮ್ಮ‌ ಮುಂದಿನ ಕಾರ್ಯಾಗಾರ ರಾಯಚೂರಿನಲ್ಲಿ ನಡೆಯಲಿದೆ. ಮೂರನೇ ಕಾರ್ಯಾಗಾರ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ. ನಾಲ್ಕನೇ ಕಾರ್ಯಾಗಾರ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ ಎಂದರು.

ಮಹದಾಯಿ ರಾಜಕೀಯ ವಿಚಾರವಾಗಿದೆ. ಮಧ್ಯಂತರ ತೀರ್ಪು ಬಂದು ಈಗ ನಮಗೆ ಸಮಾಧಾನ ತಂದಿದೆ. ಕಬ್ಬಿಣ ಕಾದಿದೆ, ಈಗ ನಾವು ಬಡಿದುಕೊಳ್ಳಬೇಕು. ಬಜೆಟ್‌ನಲ್ಲಿ ₹ 500 ಕೋಟಿ ನೀಡಿರುವುದು ಸಾಕಾಗುವುದಿಲ್ಲ. ₹ 2 ಸಾವಿರ ಕೋಟಿ ಬೇಕು. ಬಜೆಟ್‌ನಲ್ಲಿ ಕೃಷ್ಣ ಮೇಲ್ದಂಡೆಗೆ ನಯಾ ಪೈಸೆ ಕೊಟ್ಟಿಲ್ಲ. ಕೇಂದ್ರ ಸರ್ಕಾರದಿಂದ ₹13 ಸಾವಿರ ಕೋಟಿ‌ ಕೋತಾ ಆಗ್ತಾ ಇದೆ. ಇದನ್ನೇ ನಿನ್ನೆ ಯಡಿಯೂರಪ್ಪನವರೇ ಒಪ್ಪಿಕೊಂಡಿದ್ದಾರೆ. ರಾಜ್ಯದ ಬೊಕ್ಕಸದ ಸ್ಥಿತಿ ತುಂಬಾ ಚಿಂತಾಜನಕ ಆಗಿದೆ. ಇದನ್ನು ಯಡಿಯೂರಪ್ಪ ಹೇಗೆ ಸರಿ‌ ಮಾಡುತ್ತಾರೆ? ನಿನ್ನೆಯ ಬಜೆಟ್‌ನಲ್ಲಿ ಹೊಸದಾಗಿ ಏನೂ ಕೇಳಬೇಡಿ ಎಂದು ಅವರೇ ಹಿಂಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.