ADVERTISEMENT

ಯಲಗೂರೇಶನಿಗೆ 108 ಕೆಜಿ ಜೇನುತುಪ್ಪದ ಅಭಿಷೇಕ ಜುಲೈ 11ರಂದು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 14:32 IST
Last Updated 10 ಜುಲೈ 2025, 14:32 IST
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು
ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು   

ಆಲಮಟ್ಟಿ: ಸುಕ್ಷೇತ್ರ ಯಲಗೂರ ಗ್ರಾಮಕ್ಕೆ ಇದೇ ಜು.11 ಶುಕ್ರವಾರ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಆಗಮಿಸಲಿದ್ದು, ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ.

ಯಲಗೂರದಲ್ಲಿ ಶ್ರೀದಿಗ್ವಿಜಯ ಶ್ರೀಮನ್ ಮೂಲರಾಮದೇವರ ಪೂಜೆ ಸಲ್ಲಿಸಲಿದ್ದಾರೆ. ಬೆಳಿಗ್ಗೆ 10 ಕ್ಕೆ ಶ್ರೀ ಯಲಗೂರೇಶನಿಗೆ 108 ಕೆಜಿ ಜೇನುತುಪ್ಪ ಹಾಗೂ ಕ್ಷೀರಾಭಿಷೇಕ ನೆರವೇರಿಸಲಿದ್ದಾರೆ. ನಂತರ ಮುದ್ರಧಾರಣೆ ನೆರವೇರಲಿದೆ. ನಂತರ ಶ್ರೀಗಳ ಅನುಗ್ರಹ ಸಂದೇಶ ಜರುಗಲಿದೆ.

ತೆಂಗಿನ ತೋಟದಲ್ಲಿ ಮಹಾಪ್ರಸಾದ ನಡೆಯಲಿದೆ. ಶುಕ್ರವಾರ ಯಲಗೂರದಲ್ಲಿಯೇ ವಾಸ್ತವ್ಯ ಇರುವ ಶ್ರೀಗಳು, ಶನಿವಾರವೂ ವಿವಿಧ ಪೂಜೆಗಳನ್ನು ನೆರವೇರಿಸಲಿದ್ದಾರೆ, ರಾಜ್ಯದ ನಾನಾ ಕಡೆಯಿಂದ ಸಹಸ್ರಾರು ಭಕ್ತರು ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಯಲಗೂರೇಶ ದೇವಸ್ಥಾನ ಕಮಿಟಿಯ ಅಧ್ಯಕ್ಷ ಅನಂತ ಓಂಕಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.