ADVERTISEMENT

ಸಂವಿಧಾನಕ್ಕಾಗಿ ಯಾತ್ರೆ 26ಕ್ಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:40 IST
Last Updated 21 ನವೆಂಬರ್ 2019, 2:40 IST

ಬೆಂಗಳೂರು: ‘ಸಂವಿಧಾನ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿ ಸಲು ನ. 26ರಿಂದ ಡಿ.10ರವರೆಗೆ ಬೆಂಗಳೂರಿನಿಂದ ಬೀದರ್‌ವರೆಗೆ ಸಂವಿಧಾನಕ್ಕಾಗಿ ಯಾತ್ರೆ ಕೈಗೊಳ್ಳ ಲಾಗಿದೆ’ ಎಂದುಕಾಗಲ್ಸ ಸಂಸ್ಥೆಯ ಮುಖ್ಯಸ್ಥೆ ಕವಿತಾ ರೆಡ್ಡಿ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಇದು ನಡಿಗೆ, ಓಟ ಹಾಗೂ ಸೈಕಲ್ ಯಾತ್ರೆ ಒಳಗೊಂಡಿದೆ. 16 ದಿನಗಳ ಯಾತ್ರೆ ವೇಳೆ ಶಾಲಾ ಕಾಲೇಜುಗಳಲ್ಲಿ ಸಂವಾದ, ರಸಪ್ರಶ್ನೆ,ನೋಟ್‌ಬುಕ್‌ ವಿತರಣೆ, ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

‘ನ. 26ರಂದು ಬೆಳಿಗ್ಗೆ 6.30ಕ್ಕೆ ಎಚ್‌ಎಸ್‌ಆರ್‌ ಬಡಾವಣೆಯ ಸ್ವಾಭಿ ಮಾನ ಟ್ರೀ ಪಾರ್ಕ್‌ನಿಂದ ಯಾತ್ರೆ ಆರಂಭವಾಗಲಿದೆ. ದಾಸನಪುರ ಮಾರ್ಗವಾಗಿ ಸಿದ್ಧಗಂಗಾ ಮಠ, ಶಿರಾ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮುರು, ಬಳ್ಳಾರಿ, ಸಿರಗುಪ್ಪ, ಯಾದಗಿರಿ, ಸೇಡಂ, ಚಿಂಚೋಳಿ ಮಾರ್ಗವಾಗಿ ಬೀದರ್‌ ತಲುಪಲಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.