ADVERTISEMENT

ಯೆಸ್‌ ಬ್ಯಾಂಕ್‌ ಹಗರಣ: ದೆಹಲಿಗೆ ಅವಿನಾಶ್ ಭೋಸಲೆ ಕರೆತಂದ ಸಿಬಿಐ

ಪಿಟಿಐ
Published 1 ಜೂನ್ 2022, 14:25 IST
Last Updated 1 ಜೂನ್ 2022, 14:25 IST
–ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಯೆಸ್‌ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಎಬಿಐಎಲ್‌ನ ಅಧ್ಯಕ್ಷ ಅವಿನಾಶ್ ಭೋಸಲೆ ಅವರನ್ನು ವಿಚಾರಣೆಗಾಗಿ ಸಿಬಿಐ ಅಧಿಕಾರಿಗಳು ದೆಹಲಿಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಯೆಸ್‌ ಬ್ಯಾಂಕ್‌ ಸಂಸ್ಥಾಪಕ ರಾಣಾ ಕಪೂರ್‌ ಮತ್ತು ಡಿಎಚ್‌ಎಫ್‌ಎಲ್‌ನ ಕಪಿಲ್ ವಧವನ್ ಶಾಮೀಲಾಗಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಅವಿನಾಶ್ ಅವರನ್ನು 2020ರಲ್ಲಿ ಮುಂಬೈನಲ್ಲಿ ಸಿಬಿಐ ಬಂಧಿಸಿತ್ತು.

ಯೆಸ್‌ ಬ್ಯಾಂಕ್‌ ಮತ್ತು ಡಿಎಚ್‌ಎಫ್‌ಎಲ್‌ ಹಗರಣದಲ್ಲಿ ಮಹಾರಾಷ್ಟ್ರದ ಹೆಸರಾಂತ ಬಿಲ್ಡರ್‌ಗಳು ಶಾಮೀಲಾಗಿದ್ದಾರೆಯೇ ಎಂಬುದರ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪ್ರಮುಖ ಬಿಲ್ಡರ್‌ಗಳ ಕಚೇರಿಗಳಲ್ಲಿ ಏಪ್ರಿಲ್‌ 30ರಂದು ಸಿಬಿಐ ಶೋಧಕಾರ್ಯ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.