ADVERTISEMENT

ಕಾರ್ಗಲ್‌: ಮಂಗನಕಾಯಿಲೆಗೆ ಯುವಕ ಬಲಿ

ಸತ್ತು ಬೀಳುತ್ತಿರುವ ಮಂಗಗಳು; ಜನರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 20:20 IST
Last Updated 3 ಜನವರಿ 2019, 20:20 IST
(03ಕೆಆರ್ ಜಿ2ಇಪಿ)ಕಾರ್ಗಲ್ ಪಟ್ಟಣದ ಶಾಂತಿ ನಗರದಲ್ಲಿರುವ ಕೃಷಿಕರ ತೋಟದಲ್ಲಿ ಮಂಗ ಸತ್ತು ಬಿದ್ದಿದ್ದು, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಕ್ಯಾಸನೂರು ಅರಣ್ಯ ಕಾಯಿಲೆ ತಪಾಸಣಾ ವಿಶೇಷ ಘಟಕ, ಪಟ್ಟಣ ಪಂಚಾಯಿತಿ ಮತ್ತು ಪಶುವೈದ್ಯಕೀಯ ಇಲಾಖೆಯವರು ಗುರುವಾರ ತಪಾಸಣೆ ನಡೆಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

ಕಾರ್ಗಲ್‌: ಸಮೀಪದ ಅರಲಗೋಡು ಗ್ರಾಮ ಪಂಚಾಯಿತಿಯ ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಮಂಗನಕಾಯಿಲೆಗೆ ಮರಬಿಡಿ ಲೋಕರಾಜ್ ಜೈನ್ (31) ಎಂಬುವವರು ಬಲಿಯಾಗಿದ್ದಾರೆ.

ಮೃತರು ಅವಿವಾಹಿತರಾಗಿದ್ದು, ಜ್ವರದಿಂದ ಬಳಲುತ್ತಿದ್ದ ಅವರನ್ನು ಸಾಗರದ ಆಸ್ಪತ್ರೆಗೆ ದಾಖಲಿಸಿ ರಕ್ತ ತಪಾಸಣೆ ನಡೆಸಿದ್ದರು. ಚಿಕಿತ್ಸೆಗೆ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸಾಗಿಸಿದ್ದರು. ನಾಲ್ಕು ದಿನಗಳಿಂದ ಪ್ರಜ್ಞೆ ಕಳೆದುಕೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ಸತ್ತು ಬೀಳುತ್ತಿರುವ ಮಂಗಗಳು: ಇಲ್ಲಿನ ಗಡಿ ಪ್ರದೇಶಗಳಾದ ಶಾಂತಿ ನಗರ, ಮಸೀದಿ ರಸ್ತೆ, ಕುಳಕಾರು, ಇರಿಗೆಗದ್ದೆ ಪ್ರದೇಶಗಳಲ್ಲಿ ಮಂಗಗಳು ಸತ್ತು ಬೀಳುತ್ತಿವೆ. ಇದರಿಂದ ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.