ADVERTISEMENT

ರಾಜ್ಯಮಟ್ಟದ ಯುವ ಜನೋತ್ಸವ: ಮಂಗಳೂರು ಚಾಂಪಿಯನ್

ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿ.ವಿ ದ್ವಿತೀಯ, ಮೈಸೂರು ವಿ.ವಿಗೆ ತೃತೀಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 9:41 IST
Last Updated 25 ಆಗಸ್ಟ್ 2022, 9:41 IST
ಮೈಸೂರಿನಲ್ಲಿ ಗುರುವಾರ ನಡೆದ ರಾಜಮಟ್ಟದ ಯುವ ಜನೋತ್ಸವದ ಸಮಾರೋಪದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್‌.ಶಿವಪ್ಪ ಟ್ರೋಫಿ ನೀಡಿದರು. ಡಾ.ಎಂ.ಬಿ.ಸುರೇಶ, ಪ್ರೊ.ಅನಿಟ ವಿಮ್ಲಾ ಬ್ರ್ಯಾಗ್ಸ್, ಎಸ್‌.ಡಿ.ದೊಡ್ಡಾಚಾರಿ, ಡಾ.ಎಂ.ಎಸ್‌.ದಾಮೋದರ ಇದ್ದರು
ಮೈಸೂರಿನಲ್ಲಿ ಗುರುವಾರ ನಡೆದ ರಾಜಮಟ್ಟದ ಯುವ ಜನೋತ್ಸವದ ಸಮಾರೋಪದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್‌.ಶಿವಪ್ಪ ಟ್ರೋಫಿ ನೀಡಿದರು. ಡಾ.ಎಂ.ಬಿ.ಸುರೇಶ, ಪ್ರೊ.ಅನಿಟ ವಿಮ್ಲಾ ಬ್ರ್ಯಾಗ್ಸ್, ಎಸ್‌.ಡಿ.ದೊಡ್ಡಾಚಾರಿ, ಡಾ.ಎಂ.ಎಸ್‌.ದಾಮೋದರ ಇದ್ದರು   

ಮೈಸೂರು: ಇಲ್ಲಿನಮಾನಸಗಂಗೋತ್ರಿಯ ಲಲಿತಕಲಾ ಕಾಲೇಜಿನ ಆವರಣದಲ್ಲಿ ನಡೆದ ರಾಜ್ಯಮಟ್ಟದ ‘ಯುವಜನೋತ್ಸವ–2022’ದಲ್ಲಿಮಂಗಳೂರು ವಿಶ್ವವಿದ್ಯಾಲಯವು ಸಮಗ್ರ ‍ಪ್ರಶಸ್ತಿ ಪಡೆದು ಚಾಂಪಿಯನ್‌ ಆಗಿ ಹೊರಹೊಮ್ಮಿದೆ.ಬಾಗಲಕೋಟೆ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ 2ನೇ ಹಾಗೂ ಮೈಸೂರು ವಿಶ್ವವಿದ್ಯಾಲಯವು 3ನೇ ಸ್ಥಾನ ಪಡೆದಿವೆ.

ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಗುರುವಾರ ಆಯೋಜಿಸಿದ್ದ ಉತ್ಸವದ ಸಮಾರೋಪದಲ್ಲಿ ವಿಜೇತ ತಂಡ ಹಾಗೂ ಸ್ಪರ್ಧಿಗಳಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಮೈಸೂರು ವಿ.ವಿ ಕುಲಸಚಿವ ಪ್ರೊ.ಆರ್‌.ಶಿವಪ್ಪ, ಮಹಾರಾಜ ಕಾಲೇಜು ಪ್ರಾಂಶುಪಾಲರಾದ ಪ್ರೊ.ಅನಿಟ ವಿಮ್ಲಾ ಬ್ರ್ಯಾಗ್ಸ್ ವಿತರಿಸಿದರು.

ಫಲಿತಾಂಶ

ADVERTISEMENT

ವಸ್ತುಪ್ರದರ್ಶನ: 1. ಮಂಗಳೂರು ವಿ.ವಿ, 2. ಕರ್ನಾಟಕ ವಿ.ವಿ ಧಾರವಾಡ, 3. ಮೈಸೂರು ವಿ.ವಿ.ಪ್ರಹಸನ: 1.ತೋಟಗಾರಿಕೆ ವಿ.ವಿ ಬಾಗಲಕೋಟೆ, 2.ಮಂಗಳೂರು ವಿ.ವಿ, 3.ಮೈಸೂರು ವಿ.ವಿ.ರಸಪ್ರಶ್ನೆ: 1.ರಾಜೀವ್‌ ಗಾಂಧಿ ವಿ.ವಿ ಬೆಂಗಳೂರು, 2.ಕರ್ನಾಟಕ ವಿ.ವಿ, 3. ತೋಟಗಾರಿಕೆ ವಿ.ವಿ

ಚರ್ಚಾ ಸ್ಪರ್ಧೆ: ಪರ– 1. ಕೆ.ಚೈತನ್ಯ(ಮಂಗಳೂರು), 2.ರಘುವರ್ಧನ ರಾವ್‌ (ಬಾಗಲಕೋಟೆ), 3.ಚೇತನಾ ಹಿರೇಮಠ (ಕರ್ನಾಟಕ ವಿ.ವಿ). ವಿರೋಧ– 1.ರಕ್ಷಿತಾ (ಬಾಗಲಕೋಟೆ), 2.ಸಯ್ಯದ್‌ ಅನ್ವರ್ (ರಾಜೀವ್‌ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು), 3.ವಸುಮತಿ (ಮಂಗಳೂರು).ನೃತ್ಯ: 1.ಜನನಿ (ಶಿವಗಂಗೋತ್ರಿ ವಿ.ವಿ, ದಾವಣಗೆರೆ), 2.ಅನಂತಕೃಷ್ಣ (ಮಂಗಳೂರು), 3. ಹರ್ಷಿತಾ (ಮೈಸೂರು)

ಸುಗಮ ಸಂಗೀತ: ವೈಯಕ್ತಿಕ– 1. ಕವನ (ಕುವೆಂಪು ವಿ.ವಿ ಶಿವಮೊಗ್ಗ), 2.ಕೆ.ವಿ.ಚೇತನಾ (ಮೈಸೂರು), ವಿನುತಾ (ತೋಟಗಾರಿಕೆ ವಿ.ವಿ ಬಾಗಲಕೋಟೆ). ಗುಂಪು ಗಾಯನ– 1.ಕವನ ಮತ್ತು ತಂಡ (ಶಿವಮೊಗ್ಗ), 2. ಮನೋಜ್‌ ಗೌಡ (ಕರ್ನಾಟಕ ವಿ.ವಿ), 3.ಚೇತನ್‌ (ಮೈಸೂರು).

ಪ್ರಬಂಧ: 1.ಹರ್ಷಿತಾ (ಮೈಸೂರು), 2.ವಿಜಯ್‌ ಬಾಲಾಜಿ ಯಾದವ್‌ (ಬಾಗಲಕೋಟೆ), ಚೈತನ್ಯ (ಮಂಗಳೂರು).ಚಿತ್ರಕಲಾ ಸ್ಪರ್ಧೆ: ಪವನ್‌ (ಮಂಗಳೂರು), ವಿಜ‌ಯ್‌ ಬಾಲಾಜಿ ಯಾದವ್‌ (ಬಾಗಲಕೋಟೆ), ಗೀತಾಂಜಲಿ(ಬಾಗಲಜೋಟೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.