ADVERTISEMENT

ಝೀ ಕನ್ನಡ ನ್ಯೂಸ್‌ ಪ್ರಶಸ್ತಿ ಪ್ರದಾನ ಇಂದು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 15:54 IST
Last Updated 11 ಫೆಬ್ರುವರಿ 2026, 15:54 IST
ಝೀ ಕನ್ನಡ
ಝೀ ಕನ್ನಡ   

ಬೆಂಗಳೂರು: ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಅಭಿವೃದ್ಧಿಯ ಪಥದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ‘ಝೀ ಕನ್ನಡ ನ್ಯೂಸ್‌ ಸಾಧಕರ ಪ್ರಶಸ್ತಿ–2026’ ಪ್ರದಾನ ಸಮಾರಂಭವು ಇಲ್ಲಿನ ದಿ ಲಲಿತ್ ಅಶೋಕ ಹೋಟೆಲ್‌ನಲ್ಲಿ ಗುರುವಾರ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’, ಸಿನಿಮಾ ನಿರ್ದೇಶಕ ಎಸ್‌.ನಾರಾಯಣ್‌, ಅಂತರರಾಷ್ಟ್ರೀಯ ಸ್ನೂಕರ್‌ ಪಟು ಚಿತ್ರಾ ಮಗಿಮೈರಾಜ್‌, ಪುಸ್ತಕಮನೆಯ ಎಂ.ಅಂಕೇಗೌಡ ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸಂಜೆ 5ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವರಾದ ಎಚ್‌.ಕೆ.ಪಾಟೀಲ, ರಾಮಲಿಂಗಾರೆಡ್ಡಿ, ಜಿ.ಪರಮೇಶ್ವರ, ಈಶ್ವರ ಬಿ.ಖಂಡ್ರೆ, ಶಿವರಾಜ ತಂಗಡಗಿ, ರಹೀಂ ಖಾನ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಶಾಸಕ ವಿ.ಸುನಿಲ್‌ ಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ADVERTISEMENT

‘ಸನ್‌ಪ್ಯೂರ್‌ ಆಯಿಲ್‌’ ಈ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದೆ. ತನಿಷ್ಕ್‌, ಸ್ಮಾರ್ಟ್‌ಕ್ವಿಕ್‌ ಮತ್ತು ಬಂಧನ್‌ ಪ್ರಾಪರ್ಟೀಸ್‌ ಮುಖ್ಯ ಪ್ರಾಯೋಜಕತ್ವ ವಹಿಸಿವೆ. ಟಿಆರ್‌ಎಸ್‌ ರ‍್ಯಾಷನ್ಸ್‌, ಅಭಯಾ ಗೋಲ್ಡ್‌ ಬಯರ್ಸ್‌, ಕಲ್ಯಾಣ್‌ ಫುಡ್ಸ್‌ ಮತ್ತು ದಾನಗಣಪತಿ ಫೈನಾನ್ಸ್‌ ವಿಶೇಷ ಪಾಲುದಾರರಾಗಿದ್ದಾರೆ. ನಂದಿನಿ ಸಂಸ್ಥೆಯು ರಿಫ್ರೆಶ್‌ಮೆಂಟ್‌ ಪಾಲುದಾರರಾಗಿದ್ದು, ‘ಪ್ರಜಾವಾಣಿ’ ಪತ್ರಿಕೆಯು ಮುದ್ರಣ ಸಹಯೋಗ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.