ADVERTISEMENT

ಸಿಂಗಪುರದಲ್ಲಿ ವಿಜೃಂಭಿಸಿದ ರತ್ನಾವತಿ ಕಲ್ಯಾಣ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 13:17 IST
Last Updated 10 ಸೆಪ್ಟೆಂಬರ್ 2025, 13:17 IST
<div class="paragraphs"><p>ವರುಣ್‌ ರಾಘವೇಂದ್ರ</p></div>
   

ವರುಣ್‌ ರಾಘವೇಂದ್ರ

ಸಿಂಗಪುರ: ಕನ್ನಡ ನೆಲದ ಗಂಡುಕಲೆ ಯಕ್ಷಗಾನವನ್ನು ದೂರದ ಸಿಂಗಪುರದಲ್ಲಿ ಯಕ್ಷದೇಗುಲ ಬೆಂಗಳೂರು ತಂಡವು ಪ್ರದರ್ಶಿಸಿತು.

ಕನ್ನಡ ಸಂಘ ಸಿಂಗಪುರವು ಆರ್‌ಇಎಲ್‌ಸಿ ಸಭಾಂಗಣದಲ್ಲಿ ಕವಿ ಮುದ್ದಣ್ಣ ವಿರಚಿತ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರಸಂಗವನ್ನು ಆ.30ರಂದು ಆಯೋಜಿಸಿತ್ತು.

ADVERTISEMENT

ಯಕ್ಷಗಾನ ಕಲಾವಿದರಾದ ಶ್ರೀವಿಧ್ಯಾ ಹರಿತಸ, ರಾಮ ಹೆಬ್ಬಾರ್ ಎಸ್, ಶ್ರೀವತ್ಸ ಅಡಿಗ ಮತ್ತು ಪ್ರಿಯಾಂಕಾ ಕೆ. ಮೋಹನ್ ಅವರು ಪ್ರಸಂಗದಲ್ಲಿ ಅಭಿನಯಿಸಿದ್ದರು. ಲಂಬೋದರ ಹೆಗ್ಡೆ ಅವರು ಭಾಗವತಿಕೆ ಮಾಡಿದರು. ಹಿಮ್ಮೇಳನದಲ್ಲಿ ಕೋಟಾ ಸುದರ್ಶನ ಉರಾಳ, ಸುದೀಪ ಉರಾಳ ಹಾಗೂ ಮುಮ್ಮೇಳದಲ್ಲಿ ದಿನೇಶ್ ನಾಯಕ ಕಣ್ಣಾರ್, ಸುಜಯೀಂದ್ರ ಹಂದೆ ಹೆಚ್ ಹಾಗೂ ಉದಯ ಹೆಗಡೆ ಕಡಬಾಳ ಇದ್ದರು.

ಕಾರ್ಯಕ್ರಮವನ್ನು ಶಿವಕುಮಾರ್ ರಂಗಾಪುರ ಅವರು ನಿರೂಪಿಸಿದರು. ಕನ್ನಡ ಸಂಘದ ಅಧ್ಯಕ್ಷರಾದ ವೆಂಕಟೇಶ್ ಗದ್ದೆಮನೆ, ಉಪಾಧ್ಯಕ್ಷರಾದ ಕಿಶೋರ್ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.

ಅಂತರ್ಜಾಲದಲ್ಲಿ ಯಕ್ಷಗಾನ ಅಭ್ಯಾಸ:

ಯಕ್ಷದೇಗುಲ ಸಂಸ್ಥೆ ಮತ್ತು ಕನ್ನಡ ಸಂಘ ಸಿಂಗಪುರವು ಮುಂದಿನ ಪೀಳಿಗೆಗೆ ಯಕ್ಷಗಾನವನ್ನು ತಲುಪಿಸುವ ಉದ್ದೇಶದಿಂದ, ‘ರತ್ನಾವತಿ ಕಲ್ಯಾಣ’ ಪ್ರಸಂಗದ ಕಿರಾತಕನ ಸನ್ನಿವೇಶದಲ್ಲಿ ಪಾಲ್ಗೊಳ್ಳಲು ಮಕ್ಕಳಿಗೆ ಅವಕಾಶ ನೀಡಿತ್ತು. ಇದಕ್ಕಾಗಿ ಸಿಂಗಪುರದ ಮಕ್ಕಳಿಗೆ ಯಕ್ಷಗಾನವನ್ನು ಪರಿಚಯ ಮಾಡಿಸಿತ್ತು. ಅಂತರ್ಜಾಲದ ಮೂಲಕ ಅಭ್ಯಾಸ ಮಾಡಿಸಲಾಗಿತ್ತು. ಗಗನ ಹೆರ್ಲೆ, ರಿಯಾನ, ಅನಿರ್ವಿನ್ ಕಶ್ಯಪ್, ಲಕ್ಷ ಷಡಕ್ಷರಿ, ಆರಿನ್ ಗರ್ಗ್, ಆದಿತ್ರಿ ಗಾವೊಂಕರ್, ಆರ್ಯಾಹಿ ರಾಘವೇಂದ್ರ, ಅಥರ್ವ ನಾಗಮಯೂರ್ ತುಂಗಾ, ಮತ್ತು ಮಹಿಮಾ ದೀಪಕ್ ಅವರು ಇದರಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.