ADVERTISEMENT

ತೆಲಂಗಾಣ ಉಪಚುನಾವಣೆ:  ಹುಜೂರ್‌ನಗರ್‌ನಲ್ಲಿ ಟಿಆರ್‌ಎಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 13:55 IST
Last Updated 24 ಅಕ್ಟೋಬರ್ 2019, 13:55 IST
ಶನಂಪುರಿ ಸೈದಿ ರೆಡ್ಡಿ
ಶನಂಪುರಿ ಸೈದಿ ರೆಡ್ಡಿ   

ಹೈದರಾಬಾದ್: ತೆಲಂಗಾಣದ ಹುಜೂರ್‌ನಗರ್ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿನ ಉಪಚುನಾವಣೆಯಲ್ಲಿ ಆಡಳಿತರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗೆಲುವು ಸಾಧಿಸಿದೆ.

ಟಿಆರ್‌ಎಸ್ ಅಭ್ಯರ್ಥಿ ಶನಂಪುರಿ ಸೈದಿ ರೆಡ್ಡಿ ಅವರು ಕಾಂಗ್ರೆಸ್‌ನ ನಲಮದ ಪದ್ಮಾವತಿ ರೆಡ್ಡಿ ಅವರನ್ನು 43,624 ಮತಗಳ ದಾಖಲೆ ಬಹುಮತದಿಂದ ಪರಾಭವಗೊಳಿಸಿದ್ದಾರೆ. ಪದ್ಮಾವತಿ ರೆಡ್ಡಿ ಅವರು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ಉತ್ತಮ್ ಕುಮಾರ್ ರೆಡ್ಡಿ ಅವರ ಪತ್ನಿಯಾಗಿದ್ದಾರೆ.

ಸೈದಿ ರೆಡ್ಡಿ ಅವರು 1,08,004 ಮತಗಳನ್ನು ಪಡೆದಿದ್ದು ಪದ್ಮಾವತಿ ರೆಡ್ಡಿ 74,638 ಮತಗಳನ್ನು ಪಡೆದಿದ್ದಾರೆ
28 ಅಭ್ಯರ್ಥಿಗಳು ಈ ಸೀಟಿಗಾಗಿ ಸ್ಪರ್ಧಿಸಿದ್ದರು. ಇದರಲ್ಲಿ ಸ್ವತಂತ್ರ ಅಭ್ಯರ್ಥಿಸಪವತ್ ಸುಮನ್ 2,6943 ಮತಗಳನ್ನು ಗಳಿಸಿದ್ದು ಬಿಜೆಪಿ ಅಭ್ಯರ್ಥಿ ಕೋಟ ರಾಮ ರಾವ್ 2, 621 ಮತಗಳನ್ನು ಗಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.