ADVERTISEMENT

ಕೊರೊನಾ ವೈರಸ್‌ ಸೋಂಕೇ ಇಲ್ಲದ ರಾಷ್ಟ್ರಗಳು ಯಾವು ಗೊತ್ತೆ? 

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 13:52 IST
Last Updated 13 ಏಪ್ರಿಲ್ 2020, 13:52 IST
   

ಜಗತ್ತಿನಲ್ಲಿ ಕನಿಷ್ಠ 213 ರಾಷ್ಟ್ರಗಳಿಗೆ ಕೊರೊನಾ ವೈರಸ್‌ ಸೋಂಕು ಹರಡಿದೆ. ಮಹಾಮಾರಿ ವೈರಸ್‌ ಜಗತ್ತಿನಲ್ಲಿ ತಾಂಡವವಾಡುತ್ತಿದ್ದರೂ, ಅದರ ಅರಿವೇ ಇಲ್ಲದ, ಸೋಂಕು ತಗುಲದ ರಾಷ್ಟ್ರಗಳೂ ಇವೆ.

ಇಲ್ಲಿಯವರೆಗೆ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗದ ರಾಷ್ಟ್ರಗಳೆಂದರೆ ಕೊಮೊರೊಸ್, ಕಿರಿಬಾಟಿ, ಲೆಸೊಥೊ, ಮಾರ್ಷಲ್ ದ್ವೀಪಗಳು, ಮೈಕ್ರೋನೇಶಿಯಾ, ನೌರು ಈ ದೇಶಗಳಲ್ಲಿ ಇನ್ನು ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಇದಲ್ಲದೇಪಲೌ, ಸಮೋವಾ, ಸೊಲೊಮನ್ ದ್ವೀಪಗಳು, ತಜಕಿಸ್ತಾನ್, ಟೋಂಗಾ, ತುರ್ಕ್‌ಮೆನಿಸ್ತಾನ್, ತುವಾಲು ಮತ್ತು ವನವಾಟು ರಾಷ್ಟ್ರಗಳಲ್ಲೂ ಯಾವುದೇ ಪ್ರಕರಣಗಳನ್ನು ವರದಿ ಮಾಡಿಲ್ಲ.

ಚೀನಾದ ಬಗಲಿಗೇ ಇದ್ದರೂ, ಪಕ್ಕದ ದಕ್ಷಿಣ ಕೊರಿಯಾಕ್ಕೆ ಸೋಂಕು ವ್ಯಾಪಿಸಿದ್ದರೂ,ಉತ್ತರ ಕೊರಿಯಾದಲ್ಲಿ ಮಾತ್ರ ಈ ವರೆಗೆ ಸೋಂಕು ಪ್ರಕರಣಗಳು ಕಂಡು ಬಂದಿಲ್ಲ. ಹೀಗೆಂದು ಆ ದೇಶ ಈವರೆಗೆ ಹೇಳಿಕೊಂಡಿದೆ.

ADVERTISEMENT

ಕೊರೊನಾ ವೈರಸ್‌ಗೆ ಜಗತ್ತಿನಲ್ಲಿ ಈ ವರೆಗೆ 1,860,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದ್ದು, ಒಟ್ಟಾರೆ 114,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊವಿಡ್‌ 19 ಟ್ರ್ಯಾಕರ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.