ನ್ಯೂಯಾರ್ಕ್ (ಪಿಟಿಐ): ಸ್ಕಾಟ್ಲೆಂಡ್ ಮೂಲದ ಡಿಸ್ಕೊ ಜಾಕಿ ಕಾಲ್ವಿನ್ ಹ್ಯಾರಿಸ್ (32) ಅವರು ಜಗತ್ತಿನ ಅತ್ಯಧಿಕ ಸಂಪಾದನೆಯ ಡಿಜೆ ಎಂಬ ಖ್ಯಾತಿಗೆ ನಾಲ್ಕನೇ ವರ್ಷವೂ ಪಾತ್ರರಾಗಿದ್ದಾರೆ.
ಹ್ಯಾರಿಸ್ ಅವರ ವಾರ್ಷಿಕ ಗಳಿಕೆ 421 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಳೆದ ತಿಂಗಳಷ್ಟೇ 15 ವರ್ಷಗಳ ಗೆಳತಿ ಟೇಲರ್ ಸ್ವಿಫ್ಟ್ ಅವರಿಂದ ದೂರವಾದ ಕಾರಣ ಹಾಗೂ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ನೊಂದಿರುವ ಹ್ಯಾರಿಸ್‌ನ ಗಳಿಕೆ ಮಾತ್ರ ತಡೆಯಿಲ್ಲದೆ ಸಾಗಿದೆ.
ಅವರ ಆಲ್ಬಮ್‌ಗಳ ಮಾರಾಟ ಮತ್ತು ಲೈವ್ ಕಾರ್ಯಕ್ರಮಗಳೇ ಅವರ ಆದಾಯದ ಮೂಲ ಎಂದು ವಿಶ್ಲೇಷಿಸಲಾಗಿದೆ. ಇದರೊಂದಿಗೆ ಪ್ರಾಯೋಜಿತ, ದತ್ತಿ ಹಾಗೂ ಸೇವಾ ಕಾರ್ಯಕ್ರಮಗಳಿಂದಲೂ ಅವರು ಸಾಕಷ್ಟು ಗಳಿಸುತ್ತಾರೆ.
ಇಷ್ಟಾದರೂ ಹ್ಯಾರಿಸ್ ಅವರ ಗಳಿಕೆ 2015ಕ್ಕಿಂತ ಸುಮಾರು 30 ಲಕ್ಷ ಇಳಿಕೆಯಾಗಿದೆ. ಡಚ್ ಸಂಜಾತ ಟೀಸ್ಟೊ ಹಾಗೂ ಫ್ರೆಂಚ್
ಡಿಜೆ ಡೇವಿಡ್ ಗೆಟ್ಟಾ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.