ADVERTISEMENT

ಅಧ್ಯಕ್ಷರ ರಕ್ಷಣೆ: ಸಂಸತ್ ನಿರ್ಧರಿಸಲಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 19:30 IST
Last Updated 19 ಮಾರ್ಚ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಅಧ್ಯಕ್ಷರ ಸಾಂವಿಧಾನಿಕ ರಕ್ಷಣೆ ಕುರಿತಂತೆ ನಿರ್ಧರಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಬೇಕೆಂದು ಪಾಕ್ ಪ್ರಧಾನಿ ಅಧ್ಯಕ್ಷರ ಸಾಂವಿಧಾನಿಕ ರಕ್ಷಣೆ ಕುರಿತಂತೆ ನಿರ್ಧರಿಸುವ ಅಧಿಕಾರವನ್ನು ಸಂಸತ್ತಿಗೆ ನೀಡಬೇಕೆಂದು ಪಾಕ್ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಸೋಮವಾರ ಹೇಳಿದ್ದಾರೆ.

ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಮೇಲಿರುವ ಭ್ರಷ್ಟಾಚಾರ ಪ್ರಕರಣಗಳನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂಕೋರ್ಟ್‌ನ ಒತ್ತಡದ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

`ಸಾರ್ವಭೌಮ ರಾಷ್ಟ್ರವೊಂದರ ಅಧ್ಯಕ್ಷರೊಬ್ಬರನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಮ್ಯಾಜಿಸ್ಟ್ರೇಟ್ ಅಧೀನದಲ್ಲಿ ಇಡಲು ಹೇಗೆ ಸಾಧ್ಯ?~ ಎಂದು ಸುಪ್ರೀಂಕೋರ್ಟ್‌ಗೆ ನೀಡಿದ ಉತ್ತರದಲ್ಲಿ ಗಿಲಾನಿ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.