ADVERTISEMENT

ಅಮೆರಿಕದಲ್ಲಿ ಸುಂಟರಗಾಳಿಯ ಆರ್ಭಟಕ್ಕೆ 28 ಬಲಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 9:30 IST
Last Updated 3 ಮಾರ್ಚ್ 2012, 9:30 IST
ಅಮೆರಿಕದಲ್ಲಿ ಸುಂಟರಗಾಳಿಯ ಆರ್ಭಟಕ್ಕೆ 28 ಬಲಿ
ಅಮೆರಿಕದಲ್ಲಿ ಸುಂಟರಗಾಳಿಯ ಆರ್ಭಟಕ್ಕೆ 28 ಬಲಿ   

ಷಿಕಾಗೊ (ಐಎಎನ್‌ಎಸ್); ಮಧ್ಯ ಅಮೆರಿಕದಲ್ಲಿ ಸುಂಟರಗಾಳಿಯ (ಟಾರ್ನೆಡೊ) ಆರ್ಭಟಕ್ಕೆ ಎರಡು ಸಣ್ಣ ಪಟ್ಟಣಗಳು ಸರ್ವನಾಶವಾಗಿದ್ದು  28 ಮಂದಿ ಮೃತರಾಗಿದ್ದಾರೆ.

ಇಂಡಿಯಾನಾದಲ್ಲಿ 14 ಮಂದಿ ಮೃತರಾಗಿದ್ದು ಹಾಗೂ ಮೇರಿಸಿವೆಲ್ಲಿ ಪಟ್ಟಣ ದೂಳೀಪಟವಾಗಿದ್ದು, ಸಮೀಪದ ಹೆನ್ರಿವಿಲ್ಲೆ ಪಟ್ಟಣದ ಬಹುಭಾಗದಲ್ಲಿ ಭಾರಿ ನಷ್ಟ ಉಂಟಾಗಿದೆ. ನೆರೆಯ ಕೆಂಟಕಿ ನಗರವೂ ತೀವ್ರವಾಗಿ ಹಾನಿಗೀಡಾಗಿದು, ಇಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

ಭೋರ್ಘರೆಯುತ್ತ ಬುಸುಬುಸನೆ ಧಾವಿಸುತ್ತಾ ಬಂದ ಸುಂಟರಗಾಳಿ ಹೆನ್ರಿವೆಲ್ಲಿಯ ಶಾಲೆಯೊಂದರ ಛಾವಣಿಯನ್ನೇ ಕಿತ್ತೆಸೆಯಿತು. ಒಳಗಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾದವು.

ಮನೆಗಳ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಹವಾಮಾನ ಇಲಾಖೆ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಜನರು ಅಗತ್ಯ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದೆ. ಆದಾಗ್ಯೂ  ಆಸ್ತಿಪಾಸ್ತಿಗೆ ಭಾರಿ ಹಾನಿ ಸಂಭವಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT