ADVERTISEMENT

ಅಮೆರಿಕ ಎಚ್ಚರಿಕೆ ನೀಡಿಲ್ಲ: ಪಾಕ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ): ಹಖಾನಿ ಜಾಲದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಮೆರಿಕ ಅಂತಿಮ ಎಚ್ಚರಿಕೆಯನ್ನೇನು ನೀಡಿಲ್ಲ ಎಂದು ಪಾಕ್‌ನ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಸ್ಪಷ್ಟಪಡಿಸಿದ್ದಾರೆ.

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‌ಗೆ ತೆರಳಿರುವ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರನ್ನು ಭಾನುವಾರ ಭೇಟಿ ಮಾಡಿದ್ದರು. ಮಾತುಕತೆ ವೇಳೆ ಹಿಲರಿ, ಹಖಾನಿ ಜಾಲ ಮತ್ತು ಉಗ್ರರ ಸಂಘಟನೆಗಳ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು ಎಂಬ ವರದಿ ಪ್ರಕಟವಾಗಿತ್ತು. ಆದ್ದರಿಂದ ಖರ್ ಈ ಸ್ಪಷ್ಟನೆ ನೀಡಿದ್ದಾರೆ.

`ಹಿಲರಿ ಅವರೊಂದಿಗೆ ನಡೆದ ಸುದೀರ್ಘ ಮಾತುಕತೆ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ಚರ್ಚೆಯಲ್ಲಿ ನಾವಿಬ್ಬರೂ ಅಂತಿಮ ಎಚ್ಚರಿಕೆ ನೀಡುವಂತಹ ಯಾವುದೇ ಮಾತನ್ನು ಆಡಿಲ್ಲ~ ಎಂದು ಖರ್ ನ್ಯೂಯಾರ್ಕ್‌ನಲ್ಲಿ ಸುದ್ದಿಗಾರರಿಗೆ ಸ್ಪಷ್ಟ ಪಡಿಸಿದ್ದಾರೆ.

`ಒಂದೇ ವಿಚಾರ ಆಧಾರವಾಗಿಟ್ಟುಕೊಂಡು  ಚರ್ಚೆ ನಡೆಸಲಿಲ್ಲ. ಉಭಯ ದೇಶಗಳ ಹಿತಾಸಕ್ತಿ ಬಗ್ಗೆ ಸಮಗ್ರವಾಗಿ ಮಾತುಕತೆ ನಡೆಸಿದೆವು~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.