ADVERTISEMENT

ಅಸಾಂಜ್ ಗಡಿಪಾರು ಕೋರ್ಟ್‌ಗೆ ಬಿಟ್ಟ ವಿಷಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST

ಲಂಡನ್ (ಎಪಿ): ವಿಕೀಲಿಕ್ಸ್‌ನ ಸ್ಥಾಪಕ ಜೂಲಿಯಸ್ ಅಸಾಂಜ್ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ವಿಷಯದಲ್ಲಿ ತಮ್ಮ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದು, ಏಕೆಂದರೆ ಅದು ಕೋರ್ಟ್‌ಗೆ ಬಿಟ್ಟ ವಿಷಯ ಎಂದು  ಸ್ವೀಡನ್ ಪ್ರಧಾನಿ ಫ್ರೆಡ್ರಿಕ್ ರೀನ್‌ಫೆಲ್ಡ್ ಹೇಳಿದ್ದಾರೆ.ಪ್ರಸುತ್ತ ಅಸಾಂಜ್ ಲಂಡನ್‌ನಲ್ಲಿದ್ದು, ಆತನ ಮೇಲೆ ಲೈಂಗಿಕ ದೌರ್ಜನ್ಯ ಆಪಾದನೆಯೂ ಇದೆ.

ಆತನನ್ನು ಸ್ವೀಡನ್‌ಗೆ ಗಡೀಪಾರು ಮಾಡಿದರೆ ಅಲ್ಲಿಂದ ಅಮೆರಿಕಕ್ಕೆ ಗಡೀಪಾರು ಮಾಡಲಾಗುತ್ತದೆ. ಒಂದು ವೇಳೆ ಅಮೆರಿಕಕ್ಕೆ ಹೋದಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸುವ ಸಾಧ್ಯತೆ ಇದೆ ಎಂದು ಆತನ ಪರ ವಕೀಲರು ಹಾಗೂ ಬೆಂಬಲಿಗರು ಆತಂಕ ವ್ಯಕ್ತ ಪಡಿಸಿದರು.ಈ ಆರೋಪಕ್ಕೆ ಉತ್ತರಿಸಿರುವ ಸ್ವೀಡನ್ ಪ್ರಧಾನಿ ಅಸಾಂಜ್ ವಿಷಯ ನ್ಯಾಯಾಲಯದಲ್ಲಿರುವ ಕಾರಣ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.