ADVERTISEMENT

ಆತ್ಮಹತ್ಯಾ ದಾಳಿಗೆ ಐಎಸ್‌ಐ ತರಬೇತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ಇಸ್ಲಾಮಾಬಾದ್( ಪಿಟಿಐ): ಪಾಶ್ಚಿಮಾತ್ಯ ಮಿತ್ರ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆತ್ಮಹತ್ಯಾ ಬಾಂಬರ್‌ಗಳಿಗೆ ತರಬೇತಿ ನೀಡುತ್ತಿದೆ ಎಂದು ಬಿಬಿಸಿ ದಾಖಲೆಗಳ ಸಹಿತ ವರದಿ ಮಾಡಿದೆ.

ಆಫ್ಘಾನಿಸ್ತಾನದ ಗುಪ್ತಚರ ಸಂಸ್ಥೆ ಆತ್ಮಹತ್ಯಾ ದಾಳಿ ನಡೆಸಲು ತರಬೇತಿ ಪಡೆದಿದ್ದ ಯುವಕನೊಬ್ಬನನ್ನು ಸೆರೆಹಿಡಿದಿದ್ದು, ಆತನಿಂದ ಈ ಮಾಹಿತಿ ದೊರಕಿದೆ. ತಮಗೆ ತಾಲಿಬಾನ್ ಮಿಲಿಟರಿ ಶಿಬಿರಗಳಿಂದ ತರಬೇತಿ ನೀಡಲಾಗುತ್ತದೆ. ಬಳಿಕ ಮಿತ್ರ  ಪಡೆಗಳನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ದಾಳಿ ನಡೆಸಲಾಗುತ್ತದೆ ಎಂದು ಕಾಬೂಲ್ ಹೊರವಲಯದ ಜೈಲಿನಲ್ಲಿರುವ ಈ ಆತ್ಮಹತ್ಯಾ ದಾಳಿಕೋರ ಹೇಳಿದ್ದಾನೆ. 

`ತರಬೇತಿ ಶಿಬಿರಗಳಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‌ಐ) ಅಧಿಕಾರಿಗಳು ಪಾಲ್ಗೊಂಡು ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸುತ್ತಾರೆ. ಹದಿನೈದು ದಿನಗಳ ತರಬೇತಿ ನಂತರ ದಾಳಿ ನಡೆಸಲು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗುತ್ತದೆ ಎಂದೂ ಆತ ಮಾಹಿತಿ ನೀಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.