ADVERTISEMENT

ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಡಿತದಿಂದ ಮೊಸುಲ್ ಸ್ವತಂತ್ರ

ಏಜೆನ್ಸೀಸ್
Published 9 ಜುಲೈ 2017, 13:04 IST
Last Updated 9 ಜುಲೈ 2017, 13:04 IST
ಅಮೆರಿಕ ನೇತೃತ್ವದ ಮಿತ್ರಪಡೆಗಳು ಮೊಸುಲ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ದೃಶ್ಯ
ಅಮೆರಿಕ ನೇತೃತ್ವದ ಮಿತ್ರಪಡೆಗಳು ಮೊಸುಲ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ದೃಶ್ಯ   

ಬಾಗ್ದಾದ್: ಮೊಸುಲ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರರ ವಿರುದ್ಧ ಜಯ ಸಾಧಿಸಲಾಗಿದ್ದು, ನಗರವು ಉಗ್ರರ ಹಿಡಿತದಿಂದ ಸ್ವತಂತ್ರಗೊಂಡಿದೆ ಎಂದು ಇರಾಕ್‌ ಪ್ರಧಾನಿ ಹೈದರ್ ಅಲ್–ಅಬಾದಿ ಘೋಷಿಸಿರುವುದಾಗಿ ಅಲ್ಲಿನ ಪ್ರಧಾನಿ ಕಾರ್ಯಾಲಯ ಭಾನುವಾರ ತಿಳಿಸಿದೆ.

‘ಸಶಸ್ತ್ರ ಪಡೆಗಳ ಮುಖ್ಯ ಕಮಾಂಡರ್ ಆಗಿರುವ ಪ್ರಧಾನಿ ಹೈದರ್ ಅಲ್–ಅಬಾದಿ ಅವರು ಉಗ್ರರ ಹಿಡಿತದಿಂದ ಸ್ವತಂತ್ರಗೊಂಡ ಮೊಸುಲ್‌ ನಗರಕ್ಕೆ ಬಂದು ಅಲ್ಲಿನ ಜನರಿಗೆ ಮತ್ತು ಯೋಧರಿಗೆ ಅಭಿನಂದನೆ ತಿಳಿಸಿದ್ದಾರೆ’ ಎಂದು ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT