ADVERTISEMENT

ಉಗ್ರರ ರಾಕೆಟ್ ದಾಳಿ: ರಕ್ಷಣಾ ಸಚಿವ ಪಾರು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 19:30 IST
Last Updated 12 ಏಪ್ರಿಲ್ 2012, 19:30 IST

ಮೆಲ್ಬರ್ನ್ (ಪಿಟಿಐ): ಕಂದಹಾರ್ ವಿಮಾನ ನಿಲ್ದಾಣದಲ್ಲಿ ತಾಲಿಬಾನ್ ಉಗ್ರರು ನಡೆಸಿದ ರಾಕೆಟ್ ದಾಳಿಯಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಸಚಿವ ಸ್ಟೀಫನ್ ಸ್ಮಿತ್ ಅದೃಷ್ಟವಶಾತ್ ಪಾರಾಗಿದ್ದಾರೆ.

ಆಫ್ಘಾನಿಸ್ತಾನದಲ್ಲಿನ ಪಡೆಗಳೊಂದಿಗೆ ಅಘೋಷಿತ ಸಂದರ್ಶನ ನಡೆಸಿದ ಬಳಿಕ ಸ್ಮಿತ್ ಮತ್ತು ರಕ್ಷಣಾ ಪಡೆಯ ಹಿರಿಯ ಅಧಿಕಾರಿಗಳು ಹಿಂತಿರುಗಲು ಸಿದ್ಧತೆ ನಡೆಸುತ್ತಿದ್ದಂತೆಯೇ ಅವರ ಸೇನಾ ವಿಮಾನವನ್ನು ಗುರಿಯಾಗಿರಿಸಿ ರಾಕೆಟ್ ದಾಳಿ ನಡೆಸಲು ಬರುತ್ತಿರುವುದನ್ನು ವಾಯುನೆಲೆಯ ರಾಡಾರ್ ಪತ್ತೆಹಚ್ಚಿದವು ಎಂದು ಎಎಪಿ ವರದಿ ಮಾಡಿದೆ.

ಕೂಡಲೇ ಸಿ-130 ಹರ್ಕ್ಯುಲಿಸ್ ವಿಮಾನವನ್ನು ಸಂಪೂರ್ಣವಾಗಿ ಮುಚ್ಚಲಾಯಿತಲ್ಲದೆ, ಹೆಲ್ಮೆಟ್ ಧರಿಸಿ ವಿಮಾನದ ಕೆಳಭಾಗದಲ್ಲಿ ಮುದುಡಿಕೊಂಡು ಕೂರುವಂತೆ ಸ್ಮಿತ್ ಹಾಗೂ ಇತರರಿಗೆ ತಿಳಿಸಲಾಯಿತು ಎಂದೂ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದು ಆಫ್ಘನ್ ನೆಲದಲ್ಲಿ ನ್ಯಾಟೊ ಪಡೆಗಳ ಮುಖಂಡರ ಮೇಲೆ ನಡೆಯುತ್ತಿರುವ ಎರಡನೇ ದಾಳಿ. 2 ವರ್ಷದ ಹಿಂದೆ ಬ್ರಿಟನ್ ಪ್ರಧಾನಿ ಕ್ಯಾಮೆರಾನ್ ಕೂಡ ಇಂಥದ್ದೇ ದಾಳಿಯಿಂದ ಪಾರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.