
ಪ್ರಜಾವಾಣಿ ವಾರ್ತೆಸೋಲ್ (ಎಎಫ್‌ಪಿ): ಸಮುದ್ರದಲ್ಲಿ ನಡೆಸುತ್ತಿರುವ ಸಮರಾಭ್ಯಾಸದ ನಂತರ ಉತ್ತರ ಕೊರಿಯಾವು ಸಮುದ್ರ ಮಾರ್ಗದ ಮೂಲಕ ದಕ್ಷಿಣ ಕೊರಿಯಾದ ಮೇಲೆ ದಿಢೀರ್ ದಾಳಿ ನಡೆಸಬಹುದು ಎಂದು ಸೋಲ್‌ನ ರಕ್ಷಣಾ ಸಚಿವರು ಮಂಗಳವಾರ ಹೇಳಿದ್ದಾರೆ.
ಉತ್ತರಕೊರಿಯಾವು ಸಮುದ್ರದಲ್ಲಿ ಸಮರಾಭ್ಯಾಸ ಆರಂಭಿಸಿದೆ ಎಂದು ಸರ್ಕಾರದ ಪ್ರತಿನಿಧಿಗಳಿಗೆ ತಿಳಿಸಿರುವ ರಕ್ಷಣಾ ಸಚಿವ ಕಿಮ್ ಕ್ವಾನ್-ಜಿನ್, ದಕ್ಷಿಣ ಕೊರಿಯಾವನ್ನು ಗುರಿಯಾಗಿಸಿಕೊಂಡು ಅದು ಸಮುದ್ರದ ಮೂಲಕ ವಿವಿಧ ರೀತಿಯಲ್ಲಿ ಹಠಾತ್ ದಾಳಿ ನಡೆಸಬಹುದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.