ADVERTISEMENT

ಒಬ್ಬಂಟಿ ಮಹಿಳೆಯರ ಅಸುರಕ್ಷಿತ ಲೈಂಗಿಕತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2012, 19:30 IST
Last Updated 1 ಜೂನ್ 2012, 19:30 IST

ಲಂಡನ್ (ಐಎಎನ್‌ಎಸ್): ಬ್ರಿಟನ್‌ನ ಅವಿವಾಹಿತ ಇಲ್ಲವೆ ಒಬ್ಬಂಟಿ ಮಹಿಳೆಯರಲ್ಲಿ  ಶೇ 70ರಷ್ಟು ಮಹಿಳೆಯರು ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಿಗಿದ್ದಾರೆ ಎಂದು ಅಧ್ಯಯನ ಒಂದು ಹೇಳಿದೆ. ಪ್ರತಿ 10 ಅವಿವಾಹಿತ, ಇಲ್ಲವೆ ಒಬ್ಬಂಟಿ ಮಹಿಳೆಯರಲ್ಲಿ ಏಳು ಮಂದಿ ನಿಯಮಿತವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾರೆ. ಇದರಿಂದ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಲೆಕ್ಕಿಸದೆ ಅಸುರಕ್ಷಿತ ಕಾಮಕೇಳಿಯಲ್ಲಿ ಅವರು ಮಗ್ನರಾಗಿದ್ದಾರೆ ಎಂದು ಈ ಸಮೀಕ್ಷೆ  ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.