ADVERTISEMENT

ಕಾಬೂಲ್‌: ದಾಳಿ ಹೊಣೆ ಹೊತ್ತ ಐ.ಎಸ್‌ ಉಗ್ರರು

ಏಜೆನ್ಸೀಸ್
Published 14 ಮೇ 2018, 19:30 IST
Last Updated 14 ಮೇ 2018, 19:30 IST

ಕಾಬೂಲ್: ಪೂರ್ವ ಅಫ್ಗಾನಿಸ್ತಾನದ ಸರ್ಕಾರಿ ಕಟ್ಟಡದ ಮೇಲೆ ದಾಳಿ ನಡೆಸಿ 10 ಮಂದಿ ಹತ್ಯೆ ಮಾಡಿ, 40ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ ದಾಳಿಯ ಹೊಣೆಯನ್ನು ಐ.ಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಹೊತ್ತಿದೆ. ‘ಈ ದಾಳಿ ನಡೆಸಿದ್ದು ನಾವೇ’ ಎಂಬ ಹೇಳಿಕೆಯನ್ನು ಐ.ಎಸ್‌. ಉಗ್ರರು ಆನ್‌ಲೈನ್‌ಲ್ಲಿ ಬಿಡುಗಡೆ ಮಾಡಿದ್ದಾರೆ.

‘ಜಲಾಲಾಬಾದ್‌ನಲ್ಲಿರುವ ಹಣಕಾಸು ನಿರ್ದೇಶನಾಲಯದ ಮೇಲೆ ನಡೆದ ದಾಳಿಯಲ್ಲಿ ನಾಲ್ವರು ಉಗ್ರರು ಭಾಗವಹಿಸಿದ್ದರು. ಸರ್ಕಾರಿ ಕಟ್ಟಡದ ಮೇಲೆ 8 ಉಗ್ರರು ದಾಳಿ ನಡೆಸಿದ್ದಾರೆ’ ಎಂದು ನಂಗರ್ಹಾರ್ ಪ್ರಾಂತ್ಯದ ರಾಜ್ಯಪಾಲ ಖೊಗ್ಯಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT