ADVERTISEMENT

ಕೃಷ್ಣ ದೇಗುಲ ಜೀರ್ಣೋದ್ಧಾರಕ್ಕೆ ಪಾಕ್‌ ಸರ್ಕಾರ ನೆರವು

ಪಿಟಿಐ
Published 20 ಮೇ 2018, 19:49 IST
Last Updated 20 ಮೇ 2018, 19:49 IST

ಇಸ್ಲಾಮಾಬಾದ್‌: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರವು ರಾವಲ್ಪಿಂಡಿ ನಗರದಲ್ಲಿನ ಕೃಷ್ಣ ದೇಗುಲ ಜೀರ್ಣೋದ್ಧಾರಕ್ಕೆ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ರಾವಲ್ಪಿಂಡಿ–ಇಸ್ಲಾಮಾಬಾದ್‌ ಅವಳಿ ನಗರದಲ್ಲಿ ನಿತ್ಯ ಪೂಜೆ–ಪುನಸ್ಕಾರ ನಡೆಯುತ್ತಿರುವ ಏಕೈಕ ಹಿಂದೂ ದೇಗುಲ ಇದು.

ಸ್ಥಳೀಯ ಶಾಸಕರ ಮನವಿ ಮೇರೆಗೆ ಪಂಜಾಬ್‌ ಸರ್ಕಾರ ಈ ಹಣ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ದೇಗುಲ ನವೀಕರಣ ಕಾರ್ಯ ಆರಂಭಿಸಲಾಗುವುದು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಗರ್ಭಗುಡಿಯಲ್ಲಿನ ಮೂರ್ತಿಗಳನ್ನು ಬೇರೆ ಕಡೆಗೆ ಸುರಕ್ಷಿತವಾಗಿ ಇಡಲಾಗುವುದು  ಎಂದು ಆಸ್ತಿ ರಕ್ಷಣಾ ಮಂಡಳಿಯ (ಇಟಿಪಿಬಿ) ಉಪ ಆಡಳಿತಾಧಿಕಾರಿ ಮೊಹಮ್ಮದ್‌ ಆಸಿಫ್‌ ತಿಳಿಸಿದ್ದಾರೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.