ADVERTISEMENT

ಕೆನಡಿ, ನೆಹರು ಆಪ್ತರಾಗಿರಲಿಲ್ಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಹಾಗೂ ಅವರ ಪತ್ನಿ ಜಾಕ್ವೆಲಿನಾ ಅವರು ಪಂಡಿತ್ ನೆಹರು ಮತ್ತು ಅವರ ಪುತ್ರಿ ಇಂದಿರಾ ಗಾಂಧಿ ಅವರೊಂದಿಗೆ ಆಪ್ತ ಒಡನಾಟ ಇಟ್ಟುಕೊಂಡಿರಲಿಲ್ಲವಂತೆ!

1961ರ ನವೆಂಬರ್‌ನಲ್ಲಿ ನೆಹರು ಅವರು ಅವೆುರಿಕಕ್ಕೆ ಭೇಟಿ ನೀಡಿದ್ದಾಗ ಆಗ ಅಧ್ಯಕ್ಷರಾಗಿದ್ದ ಜಾನ್ ಕೆನಡಿ ` ಇದೊಂದ ಅತ್ಯಂತ ಕೆಟ್ಟ ಭೇಟಿ~ ಎಂದು ವ್ಯಂಗ್ಯವಾಡ್ದ್ದಿದರಂತೆ ಮತ್ತು ನೆಹರು ಅವರ ಅಧಿಕಾರದ ಕೊನೆಯ ದಿನಗಳ ಬಗ್ಗೆಯೂ ಟೀಕಿಸಿದ್ದರಂತೆ.

ಕೆರೋಲಿನಾ ಕೆನಡಿ ಅವರ ` ಜಾಕ್ವೆಲಿನಾ ಕೆನಡಿ: ಹಿಸ್ಟಾರಿಕ್ ಕನ್ವರ್ಸೇಶನ್ಸ್ ಆನ್ ಲೈಫ್ ವಿತ್ ಜಾನ್ ಎಫ್ ಕೆನಡಿ~ ಎಂಬ ಕೃತಿಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಕೆನಡಿ ಅವರು ನೆಹರು ಒಡನಾಟವನ್ನು ಇಷ್ಟಪಟ್ಟಿರಲಿಲ್ಲ. ಅಲ್ಲದೇ ಜಾಕ್ವೆಲಿನಾ ಕೆನಡಿ ಅವರು ಇಂದಿರಾ ಗಾಂಧಿಯನ್ನು ದ್ವೇಷಿಸುತ್ತಿದ್ದರು ಎಂದು ಈ ಕೃತಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.