ಲಂಡನ್ (ಪಿಟಿಐ): ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಶುಭ ಘಳಿಗೆ ಕೊನೆಗೂ ಬಂದಿದ್ದು ಬ್ರಿಟನ್ ರಾಜಕುಮಾರ ವಿಲಿಯಮ್ಸ ಪತ್ನಿ ಕೇಟ್ ಮಿಡ್ಲ್‌ಟನ್ ರಾಜಕುಮಾರನಿಗೆ ಸ್ಥಳೀಯ ಕಾಲಮಾನದ ಪ್ರಕಾರ ಸೋಮವಾರ ಸಂಜೆ 4.24ಕ್ಕೆ ಜನ್ಮ ನೀಡಿದ್ದಾರೆ.
ಪಶ್ಚಿಮ ಲಂಡನ್‌ನ ಸೇಂಟ್ ಮೇರಿ ಆಸ್ಪತ್ರೆಯಲ್ಲಿ ಮಗು ಜನಿಸಿದ್ದು 3.8 ಕೆಜಿ ತೂಕ ಹೊಂದಿದೆ ಎಂದು ಬಕ್ಕಿಂಗ್‌ಹ್ಯಾಂ ಅರಮನೆ ವಕ್ತಾರರು ತಿಳಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ. ವಿಲಿಯಮ್ಸ ದಂಪತಿಗೆ ಜನಿಸಿದ ಮೊದಲ ಮಗು ಇದಾಗಿದ್ದು ಬ್ರಿಟನ್‌ನ ಮುಂದಿನ ಅರಸೊತ್ತಿಗೆ ರಾಜನೊ ಇಲ್ಲ ರಾಣಿಯೊ ಎಂಬ ಕುತೂಲಹಲಕ್ಕೆ ಇದರಿಂದ ತೆರೆ ಬಿದ್ದಂತಾಗಿದೆ.
ಸಾಂಪ್ರದಾಯಿಕವಾಗಿ ಅರಮನೆ ಆವರಣದಲ್ಲಿ ಈ ಸಂತಸದ ಸುದ್ದಿಯನ್ನು ಪ್ರಕಟಿಸಲಾಗಿದೆ. ಆಸ್ಪತ್ರೆಯ ಹಿರಿಯ ವೈದ್ಯರು ಸಹಿ ಮಾಡಿದ ಈ ಪ್ರಮುಖ ಸುದ್ದಿಯ ದಾಖಲೆಯನ್ನು ಪೊಲೀಸ್ ಬೆಂಗಾವಲು ಪಡೆಯೊಂದಿಗೆ ಅರಮನೆಗೆ ತೆಗೆದುಕೊಂಡಲಾಯಿತು.
ರಾಣಿ, ರಾಜಕುಮಾರ ವಿಲಿಯಮ್ಸ,ಹ್ಯಾರಿ ಹಾಗೂ ಕೇಟ್ಸ್ ಕುಟುಂಬದ ಸದಸ್ಯರು ಈ ಸುದ್ದಿಗೆ ಸಂತಸ ವ್ಯಕ್ತಪಡಿಸಿದರು.
ಇದೇ ಆಸ್ಪತ್ರೆಯಲ್ಲಿ ರಾಜಕುಮಾರಿ ಡಯಾನಾ ಅವರು ವಿಲಿಯಮ್ ಮತ್ತು ಹ್ಯಾರಿ ಅವರಿಗೆ ಜನ್ಮ ನೀಡಿದ್ದರು. ಲಿಂಡೊ ವಿಂಗ್ ವಿಭಾಗದಲ್ಲಿ ಕೇಟ್ ಅವರ ಹೆರಿಗೆಗಾಗಿಯೇ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿತನಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.