ADVERTISEMENT

ಕ್ಷುದ್ರಗ್ರಹ ಅಧ್ಯಯನ ಯೋಜನೆ ವಿಸ್ತರಣೆ

ಪಿಟಿಐ
Published 20 ಅಕ್ಟೋಬರ್ 2017, 19:30 IST
Last Updated 20 ಅಕ್ಟೋಬರ್ 2017, 19:30 IST

ವಾಷಿಂಗ್ಟನ್ : ನಮ್ಮ ಸೌರ ಮಂಡಲದ ಅತ್ಯಂತ ದೊಡ್ಡ ಕ್ಷುದ್ರಗ್ರಹ ಸೆರೆಸ್‌ನ ಅಧ್ಯಯನ ಉದ್ದೇಶದ ‘ಡಾನ್ ಮಿಷನ್’ ಅನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಎರಡನೇ ಬಾರಿ ವಿಸ್ತರಿಸಿದೆ.

ಸದ್ಯ ಬಾಹ್ಯಾಕಾಶ ನೌಕೆಯು ಸೆರೆಸ್‌ನ ಮೇಲ್ಮೈನಿಂದ 385 ಕಿ.ಮೀ ಎತ್ತರದ ಕಕ್ಷೆಯಲ್ಲಿ ಸುತ್ತುತ್ತಿದೆ.

ನೌಕೆಯನ್ನು ಈಗ 200 ಕಿ.ಮೀ ಅಂತರಕ್ಕೆ ಇಳಿಸಿ ಕ್ಷುದ್ರಗ್ರಹವನ್ನು ಸುತ್ತಿಸಲಾಗುತ್ತದೆ.

ADVERTISEMENT

ಸೆರೆಸ್ ಹೊಮ್ಮಿಸುತ್ತಿರುವ ಗಾಮಾ ಕಿರಣಗಳು ಮತ್ತು ಸೆರೆಸ್ ಮೇಲಿರುವ ಹಿಮದ ರಾಸಾಯನಿಕ ಸಂಯೋಜನೆಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ‘ಡಾನ್ ಮಿಷನ್’ ಅನ್ನು ವಿಸ್ತರಿಸಲಾಗಿದೆ ಎಂದು ನಾಸಾ ಮೂಲಗಳು ಹೇಳಿವೆ.

2018ರ ಏಪ್ರಿಲ್ ವೇಳೆಗೆ ಸೆರೆಸ್ ಸೂರ್ಯನನ್ನು ಸಮೀಪಿಸುತ್ತದೆ. ಆಗ ಅದರ ಮೇಲಿರುವ ಹಿಮರಾಶಿ ಕರಗಿ ದ್ರವವಾಗುತ್ತದೆಯೇ ಇಲ್ಲವೇ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ. ಕ್ಷುದ್ರಗ್ರಹದ ಮತ್ತಷ್ಟು ಸ್ಪಷ್ಟವಾದ ಚಿತ್ರಗಳನ್ನು ಸೆರೆಹಿಡಿಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.