ADVERTISEMENT

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನ

ಏಜೆನ್ಸೀಸ್
Published 14 ಮಾರ್ಚ್ 2018, 5:05 IST
Last Updated 14 ಮಾರ್ಚ್ 2018, 5:05 IST
ಸ್ಟೀಫನ್ ಹಾಕಿಂಗ್ – ರಾಯಿಟರ್ಸ್ ಚಿತ್ರ
ಸ್ಟೀಫನ್ ಹಾಕಿಂಗ್ – ರಾಯಿಟರ್ಸ್ ಚಿತ್ರ   

ಕೇಂಬ್ರಿಡ್ಜ್‌: ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ (76) ಬುಧವಾರ ಬೆಳಿಗ್ಗೆ ಕೇಂಬ್ರಿಡ್ಜ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಈ ಕುರಿತು ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್‌ ಅವರು ಪ್ರಕಣೆಯಲ್ಲಿ ಮಾಹಿತಿ ನೀಡಿ, ‘ನಮ್ಮ ಪ್ರೀತಿಯ ತಂದೆಯವರ ನಿಧನದಿಂದ ದುಃಖವಾಗಿದೆ’ ಎಂದು ಹೇಳಿದ್ದಾರೆ.

ಹಾಕಿಂಗ್ ಅವರು ಸ್ನಾಯುವಿಗೆ ಸಂಬಂಧಿಸಿದ ತೀವ್ರತರದ ನರಕೋಶದ ಕಾಯಿಲೆಗೆ ತುತ್ತಾಗಿದ್ದರು. ಅಲ್ಲದೆ, ಬೆನ್ನು ಹುರಿಯ ಸ್ನಾಯು ಕ್ಷೀಣತೆಯಿಂದಲೂ ಬಳಲುತ್ತಿದ್ದರು.

ADVERTISEMENT

1942ರ ಜನವರಿ 8ರಂದು ಆಕ್ಸ್‌ಫರ್ಡ್‌ನಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಅವರು ಭೌತಶಾಸ್ತ್ರ ವಿಷಯದಲ್ಲಿ ಸಂಶೋಧನೆ ನಡೆಸಿದ್ದಾರೆ. ವಿಶ್ವವಿಜ್ಞಾನ ಹಾಗೂ ಕ್ವಾಂಟಮ್‌ ಗುರುತ್ವಾಕರ್ಷಣೆ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರದ ವಿವರಗಳನ್ನು ಕುರಿತ ಅಧ್ಯಯನ ಮತ್ತು ಸಂಶೋಧನಾ ಕೊಡುಗೆಗಳಿಂದ ಪ್ರಸಿದ್ಧಿ ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.