ಲಂಡನ್ (ಡಿಪಿಎ): ಲಿಬಿಯಾದ ನಾಯಕ ಮುಅಮ್ಮರ್ ಗಡಾಫಿ ಅವರ ಪುತ್ರ ಸೈಫ್-ಅಲ್-ಇಸ್ಲಾಂ ಅವರು ಕೃತಿಚೌರ್ಯದ ಮೂಲಕ ತಮ್ಮ ಡಾಕ್ಟರೇಟ್ ಪ್ರಬಂಧ ಸಿದ್ಧಪಡಿಸಿದ್ದಾರೆ ಎಂಬ ಆರೋಪಗಳ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹೇಳಿದೆ.
ಸೈಫ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪಡೆದಿದ್ದರು. ತಮ್ಮ ಪ್ರಬಂಧ ಸಿದ್ಧಪಡಿಸಲು ಅವರು ಬೇರೊಬ್ಬರನ್ನು ನಿಯೋಜಿಸಿದ್ದರು ಮತ್ತು ಪ್ರಬಂಧದ ಕೆಲವು ಭಾಗಗಳನ್ನು ನಕಲು ಮಾಡಿದ್ದರು ಎಂಬ ಮಾಧ್ಯಮಗಳ ವರದಿಯ ಹಿನ್ನಲೆಯಲ್ಲಿ ಸಂಸ್ಥೆ ಈ ಹೇಳಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.