ADVERTISEMENT

ಚಂದ್ರಲೋಕಕ್ಕೆ ಮತ್ತೆ ಮಾನವ

ಪಿಟಿಐ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಚಂದ್ರಲೋಕಕ್ಕೆ ಮತ್ತೆ ಮಾನವ
ಚಂದ್ರಲೋಕಕ್ಕೆ ಮತ್ತೆ ಮಾನವ   

ವಾಷಿಂಗ್ಟನ್: ’ಗಗನಯಾನಿಗಳನ್ನು ಚಂದ್ರನ ಮೇಲೆ ಕಳುಹಿಸುವಂತೆ ಟ್ರಂಪ್ ಆಡಳಿತ ನಾಸಾಗೆ ನಿರ್ದೇಶನ ನೀಡಲಿದೆ’ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ತಿಳಿಸಿದ್ದಾರೆ.

ಈ ಮೂಲಕ, ಮಂಗಳ ಗ್ರಹದ ಕಡೆಗೆ ನಾಸಾ ಗಮನ ಹರಿಸುವಂತೆ ಮಾಡಬೇಕು ಎನ್ನುವ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ನಿಲುವಿಗೆ ವ್ಯತಿರಿಕ್ತ ನಿಲುವು ತಳೆಯಲಾಗಿದೆ.

ಟ್ರಂಪ್ ಆಡಳಿತದ ಯೋಜನೆಗಳ ಕುರಿತು ಪೆನ್ಸ್ ಅವರು ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ  ಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ADVERTISEMENT

‘ಕೇವಲ ಹೆಜ್ಜೆಗುರುತುಗಳನ್ನು ಮೂಡಿಸಲು ಹಾಗೂ ಧ್ವಜ ಹಾರಿಸುವುದಕ್ಕಾಗಿ ನಾಸಾ ಗಗನಯಾನಿಗಳನ್ನು ಚಂದ್ರನ ಬಳಿ ಕಳುಹಿಸುವುದಲ್ಲ. ಭದ್ರವಾದ ಬುನಾದಿ ಹಾಕುವ ಸಲುವಾಗಿ ಅಮೆರಿಕನ್ನರನ್ನು ಮಂಗಳಗ್ರಹದ ಆಚೆಯೂ ಕಳುಹಿಸಬೇಕಾಗುತ್ತದೆ’ ಎಂದು ಪೆನ್ಸ್ ಹೇಳಿದ್ದಾರೆ.

‘ಟ್ರಂಪ್ ಅವರ ಆಡಳಿತದಲ್ಲಿ ಅಮೆರಿಕ ಪುನಃ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಚಂದ್ರನಲ್ಲಿಗೆ ಗಗನಯಾನಿಗಳನ್ನು ಕಳುಹಿಸುವ ಈ ಘೋಷಣೆಯಿಂದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲು ಬುಷ್‌ ಅವರ ದೂರದೃಷ್ಟಿಯನ್ನು ಮರಳಿ ಅಳವಡಿಸಿಕೊಂಡಂತೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.