ADVERTISEMENT

ಚರ್ಚಿಲ್ ಕಾರು 1.29 ಲಕ್ಷ ಪೌಂಡ್‌ಗೆ ಹರಾಜು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಲಂಡನ್ (ಪಿಟಿಐ): ಬ್ರಿಟನ್‌ನ ಮಾಜಿ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರ 80ನೇ ಹುಟ್ಟುಹಬ್ಬಕ್ಕೆಂದು ವಿನ್ಯಾಸಗೊಳಿಸಿದ್ದ ಲ್ಯಾಂಡ್ ರೋವರ್ ಕಾರು ಭಾರಿ ಬೆಲೆಗೆ ಹರಾಜಾಗಿದೆ.

ಹರಾಜಿನ ಮೊತ್ತ 1.29 ಲಕ್ಷ ಪೌಂಡ್.
ಕೆಂಟ್‌ನಲ್ಲಿನ ಅವರ ಚಾರ್ಟ್‌ವೆಲ್ ಎಸ್ಟೆಟ್‌ನಲ್ಲಿ ಸುತ್ತಾಡಲು ಈ ಕಾರನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿತ್ತು. 60 ಸಾವಿರ ಪೌಂಡ್‌ಗೆ ಹರಾಜಾಗುವ ನಿರೀಕ್ಷೆ ಇದೆ ಎಂದು ಬಿಬಿಸಿ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಆದರೆ ಈಗ ನಿರೀಕ್ಷೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟವಾಗಿದೆ.
ತನ್ನ ಹೆಸರು ಗೌಪ್ಯವಾಗಿರಲೆಂದು ಖರೀದಿ ಮಾಡಿದಾತ ಬಯಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.