ADVERTISEMENT

ಚೀನಾದಲ್ಲಿ ಪ್ರವಾಹ: 44 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 19:30 IST
Last Updated 10 ಜೂನ್ 2011, 19:30 IST

ಬೀಜಿಂಗ್ (ಐಎಎನ್‌ಎಸ್): ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮಧ್ಯ ಮತ್ತು ಪೂರ್ವ ಚೀನಾದ ಪ್ರದೇಶಗಳು ಜಲಾವೃತವಾಗಿದ್ದು ಕನಿಷ್ಠ 44 ಮಂದಿ  ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಹ್ಯುಬಿ, ಹುವಾನ್ ಮತ್ತು ಜಿಯಾಂಗ್‌ಜಿ ಪ್ರಾಂತ್ಯಗಳಲ್ಲಿ 33 ಮಂದಿ ಇನ್ನೂ ಕಾಣೆಯಾಗಿದ್ದಾರೆ ಎಂದು ಜಿನ್‌ಹುವಾ ವರದಿಮಾಡಿದೆ. ಹ್ಯುಬಿಯಲ್ಲಿ ಧಾರಾಕಾರ ಮಳೆಯಿಂದಾದ ಪ್ರವಾಹದಿಂದ ಭೂಕುಸಿತವಾಗಿ ಮನೆಗಳು ಕುಸಿದಿದ್ದು ನದಿಗಳ ಏರಿಗಳು ನಾಶಗೊಂಡಿವೆ ಎಂದು ಪ್ರಾದೇಶಿಕ ಪ್ರವಾಹ ನಿಯಂತ್ರಣ  ಕಚೇರಿ ತಿಳಿಸಿದೆ. ಈ ಮೂರು ಜಿಯಾನಿಂಗ್ ಕೌಂಟಿಗಳಲ್ಲಿ ಸುಮಾರು ಒಂದು ಲಕ್ಷ ಮಂದಿ ಪ್ರವಾಹದಲ್ಲಿ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.